ಹಾಲಾಡಿ: ಫೆ.17 ರಂದು ಶಾಲಿನಿ ಜಿ.ಶಂಕರ್ ಕನ್‌ವೆನ್ಸನ್ ಸೆಂಟರ್ ಲೋಕಾರ್ಪಣೆ
ಕುಂದಾಪುರ: ಜಿಲ್ಲೆಯ ಬೆಳೆಯುತ್ತಿರುವ ಪೇಟೆ ಪ್ರದೇಶ ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ ಅತ್ಯಾಧುನಿಕ ಸೌಕರ್ಯವನ್ನೊಳಗೊಂಡ ಸಂಪೂರ್ಣ ಹವಾನಿಯಂತ್ರಿತ ಶಾಲಿನಿ ಜಿ.ಶಂಕರ್ ಕನ್‌ವೆನ್ಸನ್ ಸೆಂಟರ್ ನಿರ್ಮಾಣಗೊಂಡಿದ್ದು ಫೆ.17 ರಂದು ಲೋಕಾರ್ಪಣೆಗೊಳ್ಳಲಿದೆ.
ಹಾಲಾಡಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡು, ಅತಿ ಕಡಿಮೆ ದಿನಗಳಲ್ಲಿ ಭವ್ಯವಾದ ಸಭಾಭವನ ತಲೆಯೆತ್ತಿದ್ದು ಹಾಲಾಡಿ ಪೇಟೆಯ ಸೊಬಗು ಇಮ್ಮಡಿಗೊಳಿಸಿದೆ.
ಎಲ್ಲಾ ವರ್ಗದ ಜನರ ಅಗತ್ಯತೆಗಳಿಗೆ ಸ್ಪಂದಿಸುವ ದೃಷ್ಟಿಯಿಂದ ಅತ್ಯಂತ ಸುಂದರ ವಾಸ್ತು ವಿನ್ಯಾಸದೊಂದಿಗೆ ಸಭಾಭವನ ನಿರ್ಮಿಸಲಾಗಿದೆ. ಕೈಗೆಟಕುವ ದರದಲ್ಲಿ ಮದುವೆ ಹಾಗೂ ಇನ್ನಿತರ ಶುಭಕಾರ್ಯಕ್ರಮಗಳಿಗೆ ಸಭಾಂಗಣ ತೆರೆದುಕೊಳ್ಳಲಿದೆ.
ಜನಪ್ರಿಯವಾಗಿರುವ ಶಾಮಿಲಿ ಬ್ರ್ಯಾಂಡ್‌ನೇಮನ್ನು ಹಾಲಾಡಿ ಜನತೆಗೂ
ನೀಡುವ ಉದ್ದೇಶದಿಂದ ಉಡುಪಿ ಶ್ಯಾಮಿಲಿ ಸಂಸ್ಥೆ ಸಭಾಂಗಣ ರೂಪಿಸಿದ್ದು 1000 ಆಸನ ವ್ಯವಸ್ಥೆ ಹೊಂದಿರುವ ಸಭಾಭವನ ಅಲ್ಲದೆ ಓಪನ್ ಗಾರ್ಡನ್ ಸಭಾಂಗಣ ಹೊಂದಿದೆ. ತೆರೆದ ಸಭಾಂಗಣದಲ್ಲಿ ಮದುವೆ ಇನ್ನಿತರ ಸಮಾರಂಭ ನಡೆಸಲು ಅವಕಾಶ ಮಾಡಿಕೊಡಲಾಗಿದೆ.
ಜಂಕ್ಷನ್‌ಗೆ ವಿಶೇಷ ಕಳೆ: ಧರ್ಮಸ್ಥಳ, ಕೊಲ್ಲೂರು, ಉಡುಪಿ, ಆಗುಂಬೆ, ಕುಂದಾಪುರ ಹೀಗೆ ಪ್ರಮುಖ ನಗರಗಳನ್ನು ಹಾಗೂ ಪುಣ್ಯಕ್ಷೇತ್ರ ಸಂದರ್ಶಿಸುವ ಪ್ರಮುಖ ಜಂಕ್ಷನ್ ಆಗಿರುವ ಹಾಲಾಡಿಗೆ ಸಭಾಂಗಣ ವಿಶೇಷ ಕಳೆ ನೀಡಿದೆ.
3ಕೋಟಿ ವೆಚ್ಚದಲ್ಲಿ ಈಗಾಗಲೆ ಅಭಿವೃದ್ಧಿ ಕಂಡಿರುವ ಹಾಲಾಡಿ ವೃತ್ತದ ಸಮೀಪದಲ್ಲೇ
ನಿರ್ಮಾಣಗೊಂಡಿರುವ ಹವಾನಿಯಂತ್ರಿತ ಆಕರ್ಷಣೆಯ ಸಭಾಂಗಣ ಅಪಾರ ನಿರೀಕ್ಷೆ ಮೂಡಿಸಿದೆ.