ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ : ಫ್ಯಾನ್ಸಿ ಅಂಗಡಿ ಮಾಲಕ‌ ಬಂಧನ

ಮಂಗಳೂರು_ಪುತ್ತೂರಿನಲ್ಲಿ ನಡೆದಿದ್ದ ಸಮೂಹಿಕ ಅತ್ಯಾಚಾರದ ವಿಡಿಯೋ ತೋರಿಸಿ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆಯೊಂದು ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪುವಿನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.

ದೇರಳಕಟ್ಟೆ ನಿವಾಸಿ ಸಲೀಂ(40) ಬಂಧಿತ ಆರೋಪಿಯಾಗಿದ್ದು, ಫೋಕ್ಸೋ ಕಾಯ್ದೆಯಡಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ಸಲೀಂ ನಡೆಸುತ್ತಿದ ಫ್ಯಾನ್ಸಿಗೆ ತಂದೆಯೊಂದಿಗೆ ಬ್ಯಾಗ್ ಖರೀಧಿಸಲು ಯುವತಿ ತೆರಳಿದ್ದಳು. ಈ ಸಂದರ್ಭದಲ್ಲಿ ವೀಡಿಯೋ ತೋರಿಸಿರುವ ಆರೋಪಿ ಯುವತಿಯನ್ನು ಪುಸಲಾಯಿಸಲು ಯತ್ನಿಸಿದ್ದ. ಅಲ್ಲದೆ, ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಯುವತಿ ವಿವರಿಸಿದ್ದಾಳೆ.

ಸದ್ಯ ಕೊಣಾಜೆ ಠಾಣೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!