ಸೆಂಥಿಲ್ ನೀವೂ ಕೂಡ ಆತ್ಮಹತ್ಯೆ ಮಾಡಿಕೊಳ್ಳಬೇಕಾದಿತು : ಶಾಸಕ ಸುನಿಲ್ ವಿವಾದಾತ್ಮಕ ಹೇಳಿಕೆ

ಉಡುಪಿ: ಪ್ರಧಾನಿ ಮೋದಿ ನಿಲುವನ್ನು ವಿರೋಧಿಸಿ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜಿನಾಮೆ ಕೊಟ್ಟಿದ್ದಾರೆ ಮುಂದೆ ಅವರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗಬಹುದು ಎಂದು ಕಾರ್ಕಳದ ಶಾಸಕ ಸುನೀಲ್ ಕುಮಾರ್ ಹೇಳಿದ್ದಾರೆ.
ಅವರು ಉಡುಪಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ,

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಕಾಶ್ಮೀರ ಹಾಗೂ ರಾಮ ಮಂದಿರ ವಿಚಾರದಲ್ಲಿ ಅಸಮಾಧಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ಮೋದಿ ಕೇವಲ 370ವಿಧಿಯನ್ನು ರದ್ದುಗೊಳಿಸಿದ್ದಾರೆ ಆದರೆ ಮುಂದೆ ಪಿಒಕೆ ಯನ್ನು ಕೂಡ ನಾವು ಪ್ರವೇಶ ಮಾಡುತ್ತೇವೆ .

ಅಂತಹ ಸಂದರ್ಭದಲ್ಲಿ ನೀವು ಮತ್ತು ನಿಮ್ಮಂತಹ ಮನಸ್ಥಿತಿಯವರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ, ಕಾರಣ ಅಂತಹ ನಿಲುವು ತೆಗೆದುಕೊಳ್ಳಲು ಭಾರತ ಸರ್ಕಾರ ಸಜ್ಜಾಗಿದೆ ಎಂದರು. ಮೋದಿ ಸರಕಾರ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುತ್ತಿದೆ. ನಿಮ್ಮಂತಹ ಮನಸ್ಸಿನ ಜಿಲ್ಲಾಧಿಕಾರಿಯಾಗಿದ್ದವರು ಅದನ್ನು ವಿರೋಧಿಸುತ್ತಾರೆ ಇದು ಅವರ ಧ್ವಂದ್ವ ತೋರಿಸುತ್ತದೆ. ನೀವು ತಮಿಳುನಾಡುನಲ್ಲಿ ಯಾವುದೋ ರಾಜಕೀಯ ಪಕ್ಷದಿಂದ ಚುನಾವಣೆಗೆ ನಿಲ್ಲುವ ಸಲುವಾಗಿ ದೇಶದ ವ್ಯವಸ್ಥೆಯನ್ನು ಪ್ರಶ್ನೆ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!