ಕೈಗಾರಿಕೆಗಳ ಪ್ರಾರಂಭಕ್ಕೆ ಸ್ವಯಂ ದೃಢೀಕರಣ ಅಗತ್ಯ: ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ: ಲಾಕ್‌ಡೌನ್ ಅವಧಿಯಲ್ಲಿ ಕೈಗಾರಿಕೆಗಳು ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ
ಇಲಾಖೆ ವ್ಯಾಪ್ತಿಗೆ ಬರುವ ಇತರ ಚಟುವಟಿಕೆಗಳು ಸ್ವಯಂ ದೃಢೀಕರಣ ಸಲ್ಲಿಸಿ ಕೈಗಾರಿಕೆ ಪ್ರಾರಂಭಿಸಲು ಸರಕಾರ ಸುತ್ತೋಲೆ ಹೊರಡಿಸಿದೆ.

ಸರಕಾರಿ ಆದೇಶದಂತೆ, ಅರ್ಹರಿರುವ ಕೈಗಾರಿಕೆಗಳು ಐಟಿ/ಐಟಿಇಎಸ್ ಕಂಪೆನಿಗಳು, ಡಾಟಾ/ಕಾಲ್ ಸೆಂಟರ್‌ಗಳು, ಟೆಲಿ ಕಮ್ಯೂನಿಕೇಷನ್, ಇಂಟರ್ನೆಟ್ ಸರ್ವಿಸಸ್, ಇಂಕ್ಯೂಬರೇಟರ್‌ಗಳು ಹಾಗೂ ಇನ್ನಿತರ ಕಂಪೆನಿಗಳು ಕಾರ್ಯನಿರ್ವಹಿಸುವ ಬಗ್ಗೆ ಆನ್‌ಲೈನ್‌ನಲ್ಲಿ www.kum.karnataka.gov.in ವೆಬ್‌ಸೈಟ್‌ನಲ್ಲಿCOVID-19 SELF DECLARATION ಲಿಂಕ್ ನ್ನು ಉಪಯೋಗಿಸಿಕೊಂಡು ಸ್ವಯಂ ದೃಢೀಕರಣ ಸಲ್ಲಿಸಿದ ನಂತರ ಘಟಕ ಪ್ರಾರಂಭಿಸಬಹುದಾಗಿದೆ. ಈಗಾಗಲೇ ಪ್ರಾರಂಭಿಸಿರುವ ಘಟಕಗಳು ಸಹ ಈ ಲಿಂಕ್ ಮೂಲಕ ದೃಢೀಕೃರಣ ಸಲ್ಲಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!