ಸೆಲ್ಕೋ ಫೌಂಡೇಶನ್‌: ಜ.26ರಂದು ‘ಇ-ಶಾಲಾ’ ಉದ್ಘಾಟನೆ


ಉಡುಪಿ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ 90 ಸಂವತ್ಸರಗಳನ್ನು ಪೂರೈಸಿ ಶತಮಾನೋತ್ಸವದತ್ತ ತನ್ನ ದಾಪುಗಾಲಿರಿಸಿರುವುದು, ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳ ಸ್ಫರ್ಧೆಯ ಹೊರತಾಗಿಯೂ 200 ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ.

ದಿ. ಕೆ.ಎಮ್.ಉಡುಪರವರ ನಿರಂತರ ಮಾರ್ಗದರ್ಶನದಿಂದ ಹಾಗೂ ಭಾರತೀಯ ವಿಕಾಸ ಟ್ರಸ್ಟ್‌ನ ಬೆಂಬಲದಿಂದ ಶಾಲೆಯು ಮತ್ತಷ್ಟು ಅಭಿವೃದ್ಧಿಯನ್ನು ಸಾಧಿಸಿ, ಪಾಠ, ಆಟೋಟ ಇತರ ಚಟುವಟಿಕೆಗಳಲ್ಲೂ ಭಾಗವಹಿಸುವುದರ ಮೂಲಕ ಶಿಕ್ಷಣ ಇಲಾಖೆಯಲ್ಲಿ ಉತ್ತಮ ವಿದ್ಯಾ ಸಂಸ್ಥೆ ಎಂದು ಪ್ರಶಂಸಿಸಲ್ಪಟ್ಟಿದೆ.


ಈ ಸಂಸ್ಥೆಯ ಸಾಧನೆಯನ್ನು ಗುರುತಿಸಿ ಭಾರತೀಯ ವಿಕಾಸ ಟ್ರಸ್ಟ್ ಸಂಸ್ಥೆಯ ಉಪಕ್ರಮದಲ್ಲಿ ಬೆಂಗಳೂರಿನ ಸೆಲ್ಕೋ ಫೌಂಡೇಶನ್‌ನ ಮುಖಾಂತರ ಕಂಪ್ಯೂಟರ್ ಕೇಂದ್ರವನ್ನು ಹಾಗೂ ‘ಈ ಶಾಲಾ’ ಎನ್ನುವ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯನ್ನು ನೀಡಲಾಗಿರುವುದು. ಈ ವ್ಯವಸ್ಥೆಗಳು ಸಂಪೂರ್ಣ ಸೌರ ಚಾಲಿತವಾಗಿರುವುದು.
ಈ ವ್ಯವಸ್ಥೆಗಳ ಉದ್ಘಾಟನಾ ಕಾರ್ಯಕ್ರಮವು ಜ. 26 ಬೆಳಗ್ಗೆ 10 ಘಂಟೆಗೆ ನಡೆಯಲಿದ್ದು,

ಸೌರ ಚಾಲಿತ ‘ಇ-ಶಾಲಾ’ ಉದ್ಘಾಟನೆಯನ್ನು ಸೆಲ್ಕೋ ಫೌಂಡೇಶನ್‌ನ ಸಿ.ಇ.ಒ. ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಸೌರ ವಿಜ್ಜಾನಿ ಡಾ| ಹರೀಶ್ ಹಂದೆಯವರು ನೆರವೇರಿಸಲಿರುವರು. ಸೌರ ಚಾಲಿತ ಕಂಪ್ಯೂಟರ್ ಕೇಂದ್ರವನ್ನು ಮಣಿಪಾಲ ಸಿಂಡಿಕೇಟ್ ಬ್ಯಾಂಕ್ ವಲಯ ಕಛೇರಿಯ ಮಹಾ ಪ್ರಬಂಧಕರಾದ ಶ್ರೀ ಭಾಸ್ಕರ್ ಹಂದೆಯವರು ನೆರವೇರಿಸಲಿರುವರು. ಭಾರತೀಯ ವಿಕಾಸ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಟಿ.ಅಶೋಕ್ ಪೈಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸೆಲ್ಕೋ ಸಂಸ್ಥೆಯ ಸಿ.ಇ.ಒ. ಶ್ರೀ ಮೋಹನ್ ಭಾಸ್ಕರ ಹೆಗಡೆ, ಶಾಂತಾ ಕೆ.ಎಮ್.ಉಡುಪ ಮಂದಾರ್ತಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮಂದಾರ್ತಿ ಇದರ ಅನುವಂಶಿಕ ಮೊಕ್ತೇಸರರಾದ ಎಚ್.ಧನಂಜಯ ಶೆಟ್ಟಿ, ಮಂದಾರ್ತಿ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರಾದ ಶೇಡಿಕೋಡ್ಲು ವಿಠಲ ಶೆಟ್ಟಿ ಅತಿಥಿಗಳಾಗಿ ಭಾಗವಹಿಸುವರು.

Leave a Reply

Your email address will not be published. Required fields are marked *

error: Content is protected !!