ಫೆ.1ರಿಂದ ನಂದಿನಿ ಹಾಲು ಮತ್ತು ಮೊಸರಿನ ದರ ಎಷ್ಟೆಷ್ಟು ಹೆಚ್ಚಳ ನೋಡಿ

ಉಡುಪಿ: ಗ್ರಾಮೀಣ ಪ್ರದೇಶದಲ್ಲಿ ಹಾಲಿನ ಉತ್ಪಾದನೆಗೆ ಮೇವಿನ ಕೊರತೆ, ರಾಸುಗಳ
ಸಾಕಾಣಿಕೆಗೆ ಬಳಸುವ ಪಶು ಆಹಾರದ ಬೆಲೆ, ಸಾಗಾಣಿಕೆ ಮತ್ತು ಸಂಸ್ಕರಣೆ / ಪ್ಯಾಕಿಂಗ್ ವೆಚ್ಚ ದುಬಾರಿ, ನಿರ್ವಹಣಾ ವೆಚ್ಚ ಹೆಚ್ಚಾಗಿರುವುದರಿಂದ ಹಾಗೂ ಹಾಲಿನ ಸಂಗ್ರಹಣೆ ಕಡಿಮೆಯಾಗಿರುವ ನಿಟ್ಟಿನಲ್ಲಿ ಹಾಲು ಉತ್ಪಾದನೆಗೆ ಪ್ರೋತ್ಸಾಹಿಸಲು ನಂದಿನಿ
ಹಾಲಿನ ಮಾರುಕಟ್ಟೆ ದರವನ್ನು ಹೆಚ್ಚಿಸಿ, ರೈತರಿಗೆ ಉತ್ತಮ ದರ ನೀಡುವ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಹಾಗೂ ಕರ್ನಾಟಕ ಸಹಕಾರಿ ಹಾಲು ಮಹಾಮಂಡಳದ ಆದೇಶದಂತೆ ರಾಜ್ಯದಾದ್ಯಂತ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ಬೆಲೆಯನ್ನು
ಪರಿಷ್ಕರಿಸಲಾಗಿದೆ. ಅದರಂತೆ ಫೆಬ್ರವರಿ 1 ರ ಬೆಳಗಿನ ಸರದಿಯಿಂದ ಅನ್ವಯವಾಗುವಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಈ ಕೆಳಕಂಡಂತೆ ಪರಿಷ್ಕರಿಸಲಾಗಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಂದಿನಿ ಹಾಲು ಮತ್ತು ಮೊಸರನ್ನು ನಂದಿನಿ ಡೀಲರುಗಳು ಗರಿಷ್ಟ ಮಾರಾಟ ದರಕ್ಕೆ (ಎಮ್.ಆರ್.ಪಿ) ಮೀರದಂತೆ ಮಾರಾಟ ಮಾಡಿ, ಗ್ರಾಹಕರಿಗೆ ಉತ್ತಮ ಸೇವೆ ನೀಡಲು ತಿಳಿಸಲಾಗಿದೆ. ನಂದಿನಿ ಟೋನ್ಡ್ ಹಾಲು (500 ಮಿ.ಲೀ) ಹಳೆಯ ದರ 18 ರೂ., ಪರಿಷ್ಕøತ ಎಮ್.ಆರ್.ಪಿ ದರ 19 ರೂ., ನಂದಿನಿ
ಟೋನ್ಡ್ ಹಾಲು (1000 ಮಿ.ಲೀ) ಹಳೆಯ ದರ 35 ರೂ., ಪರಿಷ್ಕøತ ಎಮ್.ಆರ್.ಪಿ ದರ 37 ರೂ., ನಂದಿನಿ ಹೋಮೊಜಿನೈಸ್ಡ್ ಹಸುವಿನ ಹಾಲು (500 ಮಿ.ಲೀ) ಹಳೆಯ ದರ 20 ರೂ., ಪರಿಷ್ಕøತ ಎಮ್.ಆರ್.ಪಿ ದರ 21 ರೂ., ನಂದಿನಿ ಹೋಮೊಜಿನೈಸ್ಡ್ ಹಸುವಿನ ಹಾಲು (6 ಲೀ. ಜಂಬೋ) ಹಳೆಯ ದರ 234 ರೂ., ಪರಿಷ್ಕøತ ಎಮ್.ಆರ್.ಪಿ ದರ 249 ರೂ., ನಂದಿನಿ ಶುಭಂ ಹಾಲು (500 ಮಿ.ಲೀ.) ಹಳೆಯ ದರ 21 ರೂ., ಪರಿಷ್ಕøತ ಎಮ್.ಆರ್.ಪಿ ದರ 22 ರೂ., ನಂದಿನಿ ಸಮೃದ್ಧಿ ಹಾಲು (500 ಮಿ.ಲೀ) ಹಳೆಯ ದರ 23 ರೂ., ಪರಿಷ್ಕøತ ಎಮ್.ಆರ್.ಪಿ ದರ 24 ರೂ., ಮೊಸರು (200 ಗ್ರಾಂ) ಹಳೆಯ ದರ
11 ರೂ., ಪರಿಷ್ಕøತ ಎಮ್.ಆರ್.ಪಿ ದರ 12 ರೂ., ಮೊಸರು (415 ಗ್ರಾಂ) ಹಳೆಯ ದರ 20 ರೂ., ಪರಿಷ್ಕøತ ಎಮ್.ಆರ್.ಪಿ 21 ರೂ., ಮೊಸರು (1 ಕೆ.ಜಿ) ಹಳೆಯ ದರ 43 ರೂ., ಪರಿಷ್ಕøತ ಎಮ್.ಆರ್.ಪಿ ದರ 45 ರೂ., ಮೊಸರು (6 ಕೆ.ಜಿ.ಜಂಬೋ) ಹಳೆಯ ದರ 252 ರೂ., ಪರಿಷ್ಕøತ ಎಮ್.ಆರ್.ಪಿ ದರ 267 ರೂ. ಗಳು.ಒಕ್ಕೂಟದಲ್ಲಿ ಹಳೆಯ ದರಗಳು ಮುದ್ರಿತವಾಗಿರುವ ಪೌಚ್ ಫಿಲಂ ದಾಸ್ತಾನು ಮುಗಿಯುವವರೆಗೆ ಹಳೆಯ ದರಗಳು
ಮುದ್ರಿತವಾಗಿರುವ ಪ್ಯಾಕೆಟ್‍ಗಳಲ್ಲಿ ನಂದಿನಿ ಹಾಲು ಮತ್ತು ಮೊಸರನ್ನು ಪ್ಯಾಕ್ ಮಾಡಿ, ಸರಬರಾಜು ಮಾಡಲಾಗುವುದು.


ಎಲ್ಲಾ ಗ್ರಾಹಕರು ಹಾಗೂ ನಂದಿನಿ ಹಾಲಿನ ಅಧೀಕೃತ ಡೀಲರುಗಳು ಪರಿಷ್ಕøತ ದರದಲ್ಲಿಯೇ ವ್ಯವಹರಿಸಿ, ಒಕ್ಕೂಟದೊಂದಿಗೆ ಸಹಕರಿಸುವಂತೆ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!