ನೀರೇ ಗ್ರಾಮ ಪಂಚಾಯತ್ ವ್ಯಾಪ್ತಿಯ 175 ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಿಸಿದ ಸಂತೋಷ್ ವಾಗ್ಳೆ
ಕಾರ್ಕಳ – ಕೋವೀಡ್ – 19ನ್ನು ತಡೆಗಟ್ಟಲು ಲಾಕ್ ಡೌನ್ ಅನುಷ್ಠಾನಗೊಳಿಸಿರುವುದರಿಂದ ತಮ್ಮ ದೈನಂದಿನ ಅಗತ್ಯತೆಯನ್ನು ಪೂರೈಸಲು ಕಷ್ಠ ಪಡುತ್ತಿದ್ದ ನೀರೇ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 175 ಕೃಷಿ ಕೂಲಿ ಕಾರ್ಮಿಕರು ಮತ್ತು ವಿವಿಧ ದಿನಕೂಲಿ ನೌಕರರ ಕುಟುಂಬಗಳಿಗೆ ದಿನ ಬಳಕೆಯ ಆಹಾರ ಸಾಮಾಗ್ರಿಗಳನ್ನೊಳಗೊಂಡ ಸುಮಾರು ರೂಪಾಯಿ 1 ,000/- ಮೌಲ್ಯದ ಆಹಾರದ ಕಿಟ್ ಗಳನ್ನು ಉಡುಪಿಯ ಗೀತಾಂಜಲಿ ಸಿಲ್ಕ್ ಮಾಲಕ ಹಾಗೂ ನೀರೆ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಸಂತೋಷ್ ವಾಗ್ಳೆ ರವರು ವಿತರಿಸಿದರು .
ಕಾರ್ಕಳ ಶಾಸಕರಾದ ವಿ. ಸುನೀಲ್ ಕುಮಾರ್ ಇವರು ಗ್ರಾಮ ಪಂಚಾಯತ್ ನ ಸಭಾಂಗಣದಲ್ಲಿ ಫಲಾನುಭವಿಗಳಿಗೆ ನೀಡಿದರು . ಸಂತೋಷ್ ವಾಗ್ಳೆ ಕೊಡ ಮಾಡಿದ ಈ ಕೊಡುಗೆಯನ್ನು ಶಾಸಕರು ಶ್ಲಾಘಿಸಿದರು. ಸಾಮಾಜಿಕ ಅಂತರವನ್ನು ಕಾಪಾಡಿ ಆಯೋಜಿಸಿದ ಈ ಕಾರ್ಯಕ್ರಮ ಕೋವಿಡ್ ತಡೆಯುವಲ್ಲಿ ಕೂಡಾ ಸಮಾಜಕ್ಕೆ ಒಂದು ಆದರ್ಶ ಸಂದೇಶ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಸದಾನಂದ ಪ್ರಭು ಹಾಗೂ ಸರ್ವ ಸದಸ್ಯರು, ಜಿಲ್ಲಾ ಪಂಚಾಯತ್ ನ ಸದಸ್ಯರಾದ ಸುಮಿತ್ ಶೆಟ್ಟಿ ಕೌಡೂರು, ತಾಲೂಕು ಪಂಚಾಯತ್ ನ ಮಾಜಿ ಅಧ್ಯಕ್ಷರಾದ ವಿಕ್ರಂ ಹೆಗ್ಡೆ, ಮಾಲಿನಿ ಜೆ ಶೆಟ್ಟಿ, ಇವರು ಉಪಸ್ಥಿತರಿದ್ದರು. ಕಿಟ್ ವಿತರಣೆಯನ್ನು ಸಾಮಾಜಿಕ ಅಂತರವನ್ನಿರಿಸಿ ಅಚ್ಚುಕಟ್ಟಾಗಿ ನೆರವೇರಿಸುವಲ್ಲಿ ಪಂಚಾಯತ್ ನ ಅಭಿವೃದ್ದಿ ಅಧಿಕಾರಿಯವರಾದ ಅಂಕಿತಾ ನಾಯಕ್ ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಿದರು.