ಮತ್ತೆ ಉಡುಪಿಯಲ್ಲಿ ಮರಳುಗಾರಿಕೆ ಪ್ರಾರಂಭ: ರಘುಪತಿ ಭಟ್
ಉಡುಪಿ: ಜಿಲ್ಲೆಯಲ್ಲಿ ಮರಳು ಸಮಸ್ಯೆಯ ವಿರುದ್ಧ ಹೋರಾಟ ನಡೆಸಿದ ಉಡುಪಿ ಶಾಸಕರಾದ ಕೆ ರಘುಪತಿ ಭಟ್ ಇವರು ಇದೀಗ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಉಡುಪಿ ಜಿಲ್ಲೆಯ ಮರಳು ದಿಬ್ಬವನ್ನು ತೆರವುಗೊಳಿಸಲು KSEZMಯ CRZ ಸಮಿತಿಯಿಂದ ಬಾಕಿ ಇದ್ದ ನಿರ್ಣಯವನ್ನು ಪೂರ್ಣಗೊಳಿಸಿ ಕಾರ್ಯದರ್ಶಿಯವರು ನೀಡಿದ್ದಾರೆ.
ಇನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಏಳು ಮಂದಿ ಸದಸ್ಯರ ಸಮಿತಿಯಲ್ಲಿ ಮಂಡಿಸಿ 171 ಜನ ಪರವಾನಗಿದಾರರಿಗೆ ಮರಳನ್ನು ನೀಡಿ ಮರಳು ವಿತರಣೆ ಆ್ಯಪ್ ಮೂಲಕ ಮಾಡಲು ಈ ನಿರ್ಣಯದಿಂದ ಅನುಕೂಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಮೂಲಕ ಕೈಗೊಂಡ ನಿರ್ಧಾರದಂತೆ ಮತ್ತೆ ಮರಳು ದಿಬ್ಬವನ್ನು ತೆರವುಗೊಳಿಸುವ ಸಂಬಂಧ ಸೂಚನೆ ನೀಡಲಾಗಿದೆ. ಹೀಗಾಗಿ ಒಂದು ವಾರದ ಒಳಗೆ ಉಡುಪಿ ಜಿಲ್ಲೆಯಲ್ಲಿ ಮತ್ತೆ ಮರಳು ಪ್ರಾರಂಭವಾಗಲಿದೆ ಎಂದು ಉಡುಪಿ ಶಾಸಕರಾದ ಕೆ ರಘುಪತಿ ಭಟ್ ಇವರು ತಿಳಿಸಿದ್ದಾರೆ.