ಉಡುಪಿಗೆ ಸಿಹಿ ಸುದ್ದಿ…ನಾಳೆಯಿಂದ ಮರಳುಗಾರಿಕೆ ಪುನರಾರಂಭ..?

ಬೆಂಗಳೂರು:- ಸಿ.ಆರ್.ಝಡ್. ವ್ಯಾಪ್ತಿಯ ಮರಳು ತೆರವುಗೊಳಿಸುವ ವಿಚಾರವಾಗಿ ಈ ಹಿಂದೆ ಆಗಸ್ಟ್ ತಿಂಗಳಿಂದ ಅನುಮತಿ ದೊರೆತಿದ್ದು ಇದೀಗ ಅದು ಮಾರ್ಪಾಡಾಗಿ ಸೆಫ್ಟೆಂಬರ್ 30 ರಿಂದ ತೆರವುಗೊಳಿಸುವಂತೆ ಮುಂದೂಡಲಾಗಿತ್ತು.

ಅಂದರೆ 2 lತಿಂಗಳು ಮುಂದಕ್ಕೆ ಹಾಕಿ ಆದೇಶವನ್ನು ಮಾರ್ಪಾಡು ಮಾಡಲಾಗಿತ್ತು. ಈ ಬಗ್ಗೆ ಇಂದು ಖುದ್ದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರನ್ನು ಭೇಟಿ ಮಾಡಿದ ಉಡುಪಿ ಶಾಸಕರಾದ ಕೆ ರಘುಪತಿ ಭಟ್ ಹಾಗೂ ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಅವರು ಈ ಆದೇಶವನ್ನು ಮಾರ್ಪಾಡಿಸಿ ಜುಲೈ 31ರಿಂದಲೇ ಮರಳು ದಿಬ್ಬ ತೆರವುಗೊಳಿಸುವಂತೆ ಅನುಮತಿ ನೀಡಬೇಕೆಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!