ಲಾಕ್‌ಡೌನ್ ಮುಗಿಯುವವರೆಗೆ ಸಲೂನ್, ಹೇರ್ ಕಟಿಂಗ್ ಶಾಪ್ ಓಪನ್ ಆಗಲ್ಲ: ಕೇಂದ್ರ
ನವದೆಹಲಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಶನಿವಾರ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾಗ ಕೆಲವು ಗೊಂದಲಗಳಿದ್ದು ಇದಕ್ಕೀಗ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಸ್ಪಷ್ತನೆ ನೀಡಿದೆ.
ಸಲೂನ್ ಗಳು, ಪಾರ್ಲರ್‌ಗಳು ಮತ್ತು ಕ್ಷೌರಿಕನ ಅಂಗಡಿಗಳಿಗೆ ಕೆಲಸ ಮಾಡಲು ಈ ಮಾರ್ಗಸೂಚಿ ಅವಕಾಶ ಕಲ್ಪಿಸುತ್ತದೆ ಎಂಬ ಮಾಹಿತಿ ಇತ್ತು, ಆದರೆ ಇದೀಗ ಅದು ಸಾಧ್ಯವಿಲ್ಲ ಎಂದು ತಿಳಿದುಬಂದಿದೆ .
ಹೊಸ ಮಾರ್ಗಸೂಚಿಗೆ ನೀಡಿದ್ದ ಸ್ಪಷ್ಟನೆಯಲ್ಲಿ ಸರ್ಕಾರ “ಹೇರ್ ಸಲೊನ್ಸ್ ಮತ್ತು ಕಟಿಂಗ್ ಶಾಪ್ ಗಳು ಮೇ ೩ರವರೆಗೆ ತೆರೆಯುವುದಿಲ್ಲ. ನಮ್ಮ ಈ ಹಿಂದಿನ ಆದೇಶವು ವಸ್ತುಗಳ ಮಾರಾಟ ನಡೆಸುವ ಅಂಗಡಿಗಳಿಗಷ್ಟೇ ಅನ್ವಯವಾಗಲಿದೆ. ಕಟಿಂಗ್ ಶಾಪ್ ಹಾಗೂ ಹೇರ್ ಸಲೂನ್ಗಳನ್ನು ತೆರೆಯಲು ಯಾವುದೇ ಅನುಮತಿಯಿಲ್ಲ.ಅಂತೆಯೇ ಮದ್ಯದಂಗಡಿಗಳನ್ನು ತೆರೆಯಲು ಸಹ ಅನುಮತಿಯಿಲ್ಲ” ಎಂದಿದೆ