ಮುಂಬೈ ಬಾರ್ ಮಾಲಕನ ಹತ್ಯೆಯ ಸೂತ್ರಧಾರ ಎಕೆಎಮ್ಎಸ್ ಸೈಫುದ್ದೀನ್ ಬಂಧನ

ಉಡುಪಿ: ನವಿಮುಂಬೈ ಲೇಡಿಸ್ ಬಾರ್ ಮಾಲಕನ ಹತ್ಯೆ ಪ್ರಕರಣದ ಪ್ರಮುಖ ಸೂತ್ರಧಾರಿ, ಲೇಡಿಸ್ ಬಾರ್‌ನ ಪಾಲುದಾರ ಆತ್ರಾಡಿಯ ಸೈಫುದ್ದೀನ್ ಬಂಧನ. ಈ ಪ್ರಕರಣದದಲ್ಲಿ ಇವರೆಗೆ ಐವರ ಬಂಧನವಾಗಿದ್ದು ಇನ್ನೋರ್ವ ಪಾಲುದಾರ ಅಕ್ರಮ್ ಪೊಲೀಸ್ ಬಂಧನದಿಂದ ತಪ್ಪಿಸಿಕೊಂಡಿದ್ದಾನೆ.
ಕಳೆದ ಆರು ವರ್ಷಗಳಿಂದ ಮುಂಬಯಿ ಮಾಯಾ ಲೇಡೀಸ್ ಬಾರ್‌ನ ಮಾಲಕ ವಸಿಷ್ಠ ಸತ್ಯನಾರಾಯಣ ಯಾದವ್‌ನ ಪಾಲುದಾರಿಕೆ ಪಡೆದುಕೊಂಡ ಅಕ್ರಮ್ ಮತ್ತು ಸೈಫುದ್ದಿನ್ ಹಣ ನೀಡುವ ಪ್ಲಾನ್ ರೂಪಿಸಿ ಮಾಲಕ ವಸಿಷ್ಠ ಸತ್ಯನಾರಾಯಣ ಯಾದವ್ ನನ್ನು ಹತ್ಯೆ ಮಾಡಿರುವುದಾಗಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.


ಪ್ರಕರಣದ ಪ್ರಮುಖ ರೂವಾರಿ ಸೈಫುದ್ದಿನ್‌ನನ್ನು ಬ್ರಹ್ಮಾವರ ಸರ್ಕಲ್ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ನೇತೃತ್ವದ ಪೊಲೀಸರ ತಂಡ ಇಂದು ಉಡುಪಿಯಲ್ಲಿ ಬಂಧಿಸಿದೆ. ಪ್ರಕರಣದ ಇನ್ನೋರ್ವ ಅಕ್ರಂ ಇನ್ನು ಪೊಲೀಸರ ಕೈಗೆ ಸಿಗದೆ ನಾಪತ್ತೆಯಾಗಿದ್ದಾನೆ. ಈಗಾಗಲೇ ಈ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.


ಎಕೆಎಮ್ಎಸ್ ಬಸ್ಸಿನ ಮಾಲಕನಾದ ಸೈಪುದ್ಧೀನ್ಗೆ ಇವನ ಮೂವರು ಸಿಬ್ಬಂದಿಗಳು ಮತ್ತು ಬಾರ್ ನ ಮಾಜಿ ಸಪ್ಲೈಯರ್ ಸಾಥ್ ನೀಡಿದ್ದಾರೆ.

ನಾಲ್ವರನ್ನು ಘಟನೆ ನಡೆದ 24 ತಾಸಿನೊಳಗೆ ಪೊಲೀಸರು ಬಂಧಿಸಿದ್ದಾರೆ. ಸೈಫುದ್ದೀನ್ ಈ ಹಿಂದೆ ಕೂಡ ಚಿನ್ನದ ವ್ಯವಹಾರದ ಪಾಲುದಾರರನ್ನುಇದೆ ರೀತಿ ಹತ್ಯೆ ಮಾಡಿ ಆತ್ರಾಡಿಯ ಮದಗದ ಹಾಡಿಯೊಂದರಲ್ಲಿ ಎಸೆದು ಹೋಗಿದ್ದ.

Leave a Reply

Your email address will not be published. Required fields are marked *

error: Content is protected !!