ಉದ್ಯಮಿ ಡಾ. ತಲ್ಲೂರು ಶಿವರಾಮ ಶೆಟ್ಟಿಯವರಿಗೆ “ಸಾಧಕ ರತ್ನ” ಪ್ರಶಸ್ತಿ

ಉಡುಪಿ : ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ.) ಕೇರಳ ಕನ್ನಡಪರ ಸಂಘಟನೆಗಳ ಒಕ್ಕೂಟ ಇವರು ಕೊಡಮಾಡುವ ” ಸಾಧಕ ರತ್ನ ” ಪ್ರಶಸ್ತಿಯನ್ನು ಉದ್ಯಮಿ ಮತ್ತು ನಿಕಟಪೂರ್ವ ಲಯನ್ಸ್ ಜಿಲ್ಲಾ ಗವರ್ನರ್ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರಿಗೆ ಘೋಷಿಸಲಾಗಿದೆ.

ಸೆ. 15 ಶನಿವಾರದಂದು ಬೆಳಿಗ್ಗೆ 10. ಘಂಟೆಗೆ ಕಾಸರಗೋಡಿನಲ್ಲಿ, ಕೇರಳದ ಹಬ್ಬವಾದ ಓಣಂ ಕಾರ್ಯಕ್ರಮದ ಅಂಗವಾಗಿ ನಡೆಸುವ “ಗಡಿನಾಡ ಓಣಂ ಉತ್ಸವ” ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಗಣ್ಯರ ಸಮ್ಮುಖದಲ್ಲಿ ಸ್ವೀಕರಿಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!