ಕ್ಷೌರಿಕ, ಆಟೋ, ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂ: ಸಂಕಷ್ಟದಲ್ಲಿರೋರಿಗೆ 1,610 ಕೋಟಿಯ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ

ಬೆಂಗಳೂರು: ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿರೋರಿಗಾಗಿ ಸಿಎಂ ಯಡಿಯೂರಪ್ಪ ಸರ್ಕಾರ 1,610 ಕೋಟಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

ಲಾಕ್‍ಡೌನ್ ನಿಂದಾಗಿ ಹೂವು ಬೆಳೆದವರು ನಷ್ಟ ಅನುಭವಿಸಿದ್ದಾರೆ 11,687 ಹೆಕ್ಟೆರ್ ವಿಸ್ತೀರ್ಣದಲ್ಲಿ ಬೆಳೆದ ಹೂ ಮಾರಾಟ ಆಗದೆ ರೈತರಿಗೆ ನಷ್ಟವಾಗಿದೆ. ಹಾಗಾಗಿ ಹೂ ಬೆಳೆಗಾರರಿಗೆ ಒಂದು ಹೆಕ್ಟೇರ್ ಗೆ 25 ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ಒಂದು ತಿಂಗಳಿನಿಂದ ಕೆಲಸವಿಲ್ಲದೇ ಕುಳಿತಿರುವ ಕ್ಷೌರಿಕ, ಆಟೋ, ಟ್ಯಾಕ್ಸಿ ಚಾಲಕರು, ಅಗಸರಿಗೆ 5 ಸಾವಿರ ರೂ. ಪರಿಹಾರ ಸರ್ಕಾರ ಘೋಷಣೆ ಮಾಡಿದೆ. ಅಂದಾಜು 60,000 ಅಗಸರು, 2,30,000 ಕ್ಷೌರಿಕರು, ಆಟೋ ಹಾಗೂ ಟ್ಯಾಕ್ಸಿ ಚಾಲಕರು ಒಟ್ಟು 7,75000 ಜನ ಇದ್ದಾರೆ .

ಸಣ್ಣ ಹಾಗೂ ಮಧ್ಯಮ ವರ್ಗದ ಕೈಗಾರಿಕೆ ಹಾಗೂ ಉದ್ಯಮಗಳ ವಿದ್ಯುತ್ ಬಿಲ್ಲಿನ ಫಿಕ್ಸೆಡ್ ಚಾರ್ಜ್ ನಲ್ಲಿ 2 ತಿಂಗಳ ಬಿಲ್ ಮನ್ನಾ ಮಾಡಲಾಗಿದೆ. ಬೃಹತ್ ಕೈಗಾರಿಕೆಗಳ ವಿದ್ಯುತ್ ಬಿಲ್ ಪಾವತಿ ಬಡ್ಡಿ ರಹಿತವಾಗಿ 2 ತಿಂಗಳಿಗೆ ಮುಂದೂಡಲಾಗಿದೆ. ನೇಕಾರರಿಗೆ 109 ಕೋಟಿ ಸಾಲಮನ್ನ ಘೋಷಿಸಲಾಗಿದೆ. ಮೊದಲು 29 ಕೋಟಿ ಮನ್ನ ಮಾಡಲಾಗಿತ್ತು ಉಳಿದ ಹಣವನ್ನ ಸರ್ಕಾರ ಕೂಡಲೇ ಬಿಡುಗಡೆ ಮಾಡಲಾಗುತ್ತದೆ.

1 ಲಕ್ಷದ ಒಳಗಿನ ಸಾಲ ಕಟ್ಟಿದ ನೇಕಾರರಿಗೆ ಕಟ್ಟಿದ ಹಣವನ್ನ ವಾಪಸ್ ಕೊಡಲು ಸರ್ಕಾರ ತೀರ್ಮಾನಿಸಿದೆ. ನೇಕಾರ್ ಸಮ್ಮಾನ್ ಯೋಜನೆ ಅಡಿಯಲ್ಲಿ 54 ಸಾವಿರ ಕೈ ಮಗ್ಗ ನೇಕಾರರಿಗೆ ವರ್ಷಕ್ಕೆ 2 ಸಾವಿರ ಹಣ ಅವರ ಖಾತೆಗೆ ಹಾಕಲಾಗುವುದು .

ಕಟ್ಟಡ ಕಾರ್ಮಿಕರಿಗೆ ₹3,000 ಹೆಚ್ಚುವರಿಯಾಗಿ ಪರಿಹಾರ ನೀಡಲು ಕ್ರಮ. ರಾಜ್ಯ ಬಿಟ್ಟು ಹೊರಹೋದಂತೆ ಉಳಿಸಿಕೊಳ್ಳಲು ಕ್ರಮ. ಈ ಹಿಂದೆ ₹2,000 ಪರಿಹಾರ ನೀಡಲಾಗಿದೆ. ಒಟ್ಟು ₹5,000 ಪರಿಹಾರ. 

ಮಾಸ್ಕ್‌ ಹಾಕಿಕೊಳ್ಳಬೇಕು, ಅಂತರ ಕಾಯ್ದುಕೊಳ್ಳಬೇಕು. ಸೂಕ್ತ ಎಚ್ಚರಿಕೆ ವಹಿಸಬೇಕು. ಆರ್ಥಿಕ ಚೇತರಿಕೆ ಹಾಗೂ ಕೋವಿಡ್‌–19 ಕುರಿತು ಮುನ್ನೆಚ್ಚರಿಕೆ ಜೊತೆಜೊತೆಯಾಗಿ ಸಾಗಬೇಕಿರುವುದು ಅನಿವಾರ್ಯವಾಗಿದೆ.  ತರಕಾರಿ, ಹಣ್ಣು ಬೆಳೆಗಾರರಿಗೂ ಸೂಕ್ತ ಪರಿಹಾರ ನೀಡಲಾಗುತ್ತದೆ

5 thoughts on “ಕ್ಷೌರಿಕ, ಆಟೋ, ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂ: ಸಂಕಷ್ಟದಲ್ಲಿರೋರಿಗೆ 1,610 ಕೋಟಿಯ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ

  1. SBI.bank 31836282881mahanetsh.s.hiremath.a/t.post /.distc.haveri.my.dl.nambr.ka2720060002875.badge.no.1695.

  2. ಎಲ್ಲಾ ಸರಿ..,ಈವಾಗ ಬ್ಯಾಂಕ್ನವರು,ಫೈನಾನ್ಸ್ ನವರು ಇ.ಎಮ್.ಐ.ವಿನಾಯಿತಿ ಕೂಡುತ್ತಾರೆ ಎಂದು ತಪ್ಪಾಗಿ ಘೋಷಣೆ ಮಾಡಿದ್ದಾರೆ..ಯಾಕಂದ್ರೆ..ಅವರು ವಸೂಲಿ ಮಾಡ್ತಾ ಇದ್ದಾರೆ…ದೂಡ್ಡ ವ್ಯಕ್ತಿಗಳ ಕೋಟಿಗಟ್ಲೆ ಸಾಲ ಮನ್ನ ಮಾಡಿದ್ದಾರೆ….ಹಾಗಾದ್ರೆ ಬಡವರ ಗತಿ ಏನು…? ಬಡವರು ಕೂಡ ಒಂದು ಸಾಲ ತೀರಿಸಲು ಇನ್ನೂಂದು ಸಾಲ ಅಂತ ತುಂಬಾ ಸಾಲ ಮಾಡಿರ್ತಾರೆ ಅವರಿಗೆ ಮನ್ನಾ ಮಡಲು ಆಗದಿದ್ದರೆ , ಎಲ್ಲಾ ಸಾಲವನ್ನು ಒಂದೇ ಕಡೆ ಮಾಡಿ (ಸರಕಾರಿ ಬ್ಯಾಂಕ್ ನಲ್ಲಿ)ಕಡಿಮೆ ಬಡ್ಡಿ ಯಲ್ಲಿ ಸಾಲ ಕೊಡಿಸ ಬಹುದಲ್ವ….??

  3. Very good decision sir it helps many of us to maintain daily expences of our family thank you sir

Leave a Reply

Your email address will not be published. Required fields are marked *

error: Content is protected !!