ಗೋ ಕಳ್ಳರ ವಿರುದ್ದ ರೌಡಿ ಶೀಟ ದಾಖಲಿಸುವಂತೆ : ಶಾಸಕ ಡಾ.ಭರತ್ ಶೆಟ್ಟಿ ವೈ ಒತ್ತಾಯ

ಮಂಗಳೂರು : ಗೋಕಳ್ಳತನ ಇಂದು ಬಂಡವಾಳ ಇಲ್ಲದೆ ಹಣಗಳಿಸಲು ಸುಲಭ ದಾರಿಯಂತೆ ಆಗಿದ್ದು ಕಳ್ಳರು ಯಾವುದೇ ಭಯವಿಲ್ಲದೆ ಮಾರಕಾಯುಧಗಳನ್ನು ತೋರಿಸಿ ಹಟ್ಟಿಯಿಂದ ಗೋವನ್ನು ಕದಿಯುತ್ತಿರುವುದು ಕಳವಳಕಾರಿ ವಿಚಾರ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ಮನೆಯೊಂದರಿಂದ ದನ ಕಳ್ಳತನ ಘಟನೆ ನಡೆದಿರುವುದು ನೋವನ್ನುಂಟು ಮಾಡಿದೆ. ಹೈನುಗಾರಿಕೆ ನಂಬಿ ಜೀವನ ನಡೆಸುವವರು ಇದರಿಂದ ನಷ್ಟಕ್ಕೊಳಗಾಗುತ್ತಿದ್ದಾರೆ. ಸಾಲ ಮಾಡಿ ಉತ್ತಮ ತಳಿಯ ದನ ಖರೀದಿಸಿ ಸ್ವಾವಲಂಬಿ ಜೀವನ ನಡೆಸಲು ಗೋಕಳ್ಳರಿಂದ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗದಂತೆ ಇಲಾಖೆ ತಡೆದು ರೈತರಿಗೆ ,ಹೈನುಗಾರರಿಗೆ ಭದ್ರತೆಯ ಭರವಸೆ ನೀಡಬೇಕಿದೆ.

ಮಂಗಳೂರು ಸಹಿತ ದ.ಕ ಜಿಲ್ಲೆಯಲ್ಲಿ ಶಾಂತಿ,ಸೌಹಾರ್ಧತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಠಿಣ ಕಾರ್ಯಚರಣೆ ನಡೆಸುವ ಮೂಲಕ ದನಕಳ್ಳರನ್ನು ಮಟ್ಟ ಹಾಕುವ ಸಮಯ ಬಂದಿದೆ. ಮಂಗಳೂರು ಸುತ್ತಮುತ್ತ ಅನಧಿಕೃತ ಕಸಾಯಿಖಾನೆಗಳು ಗೋಕಳ್ಳರಿಗೆ ವರದಾನವಾಗಿದ್ದು ಕದ್ದ ದನಗಳನ್ನು ಇಂತಹ ಕಡೆ ವಧಿಸಲಾಗುತ್ತಿದೆ. ಇಂತಹ ಕಸಾಯಿಖಾನೆಗಳನ್ನು ಗುರುತಿಸಿ ಅದನ್ನು ನಡೆಸುವವರನ್ನು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಒತ್ತಾಯಿಸಿದ್ದಾರೆ.

ಈ ನಿಟ್ಟಿನಲ್ಲಿ ಗೋ ಕಳ್ಳತನ ಮಾಡುವವರು ಮತ್ತು ಗೋ ಕಳ್ಳತನಕ್ಕೆ ಬೆಂಬಲ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದರೊಂದಿಗೆ ಗೋ ಕಳ್ಳರು ಹಾಗೂ ಅವರಿಗೆ ಬೆಂಬಲ ನೀಡುವವರ ವಿರುದ್ಧ ರೌಡಿ ಶೀಟರ್ ಕೇಸ್ ದಾಖಲಿಸಿ ಗಡಿಪಾರು ಮಾಡಬೇಕು. ಪ್ರಮುಖ ಸಂಚಾರ ಕೇಂದ್ರಗಳಲ್ಲಿ ಗುಣಮಟ್ಟದ ಸಿ ಸಿ ಕ್ಯಾಮರಾ ಅಳವಡಿಸಿ ಗೋ ಕಳ್ಳರ ಚಲನವಲನಗಳ ಮೇಲೆ ನಿಗಾ ಇಡಬೇಕು.

ದನವನ್ನು ಸಾಕಲು ಹಸು ಸಹಿತ ಕೊಳ್ಳುವವರು ಪರವಾನಗಿ ಹಾಗೂ ಪಶು ವೈದ್ಯರಿಂದ ದೃಢೀಕರಣ ಪತ್ರವನ್ನು ಹೊಂದಿರುವುದರ ಬಗ್ಗೆ ತಪಾಸಣೆ ನಡೆಸಬೇಕು. ಕೋಮು ಸೌಹಾರ್ಧತೆಯ ದೃಷ್ಟಿಯಿಂದ ಸಂಜೆ ೭ರಿಂದ ಬೆಳಗ್ಗೆ ೭ರ ತನಕ ಅನುಮತಿ ಪಡೆದ ದನ ಸಾಗಾಟಕ್ಕೂ ನಿಷೇಧ ಹೇರಬೇಕು. ದನಕಳ್ಳತನ ತಡೆಯಲು ವಿಶೇಷ ಪೆಟ್ರೋಲಿಂಗ್ ವ್ಯವಸ್ಥೆ ಜಾರಿಗೆ ತರಬೇಕು.

ಜೂ.೧೭ರಂದು ಕೃಷ್ಣಾಪುರದಲ್ಲಿ ದನ ಕಳ್ಳತನ ನಡೆದ ಬಳಿಕ ದೂರುದಾರರ ಮನವಿಗೆ ಕ್ಷಿಪ್ರವಾಗಿ ಸ್ಪಂದಿಸುವ ಮೂಲಕ ಆಯುಕ್ತರಾದ ತಮ್ಮ ಕಾರ್ಯ ಪ್ರಶಂಸನೀಯವಾಗಿದ್ದರೂ ಇನ್ನಷ್ಟು ಕಠಿಣ ಕ್ರಮಕ್ಕೆ ಮುಂದಾಗಬೇಕು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!