ಕಂದಾಯ ಸಚಿವ ಆರ್ ವಿ ದೇಶಪಾಂಡೆ ಉಡುಪಿಗೆ ಭೇಟಿ ಅಧಿಕಾರಿಗಳ ಜೊತೆ ಸಭೆ
ಉಡುಪಿ- ಕರ್ನಾಟಕ ಸರಕಾರ ಕಂದಾಯ ಸಚಿವ ಆರ್ ವಿ ದೇಶಪಾಂಡೆ ಇಂದು ಬೆಳ್ಳಿಗೆ ಉಡುಪಿಗೆ ಭೇಟಿ ನೀಡಿದರು. ಸಚಿವರು ಹೆಜಮಾಡಿಗೆ ಭೇಟಿ ನೀಡಿ ಮಳೆಯಿಂದಾಗಿ ಹಾನಿಗೊಂಡ ರಸ್ತೆಯನ್ನು, ಕಾಪು ಪುರಸಭೆ ವ್ಯಾಪ್ತಿಯ ಲೌಟ್ ಹೌಸ್ ಸಮೀಪ ನದಿ ದಂಡೆ ಸಂರಕ್ಷಣಾ ಕಾಮಗಾರಿಯನ್ನ ವೀಕ್ಷಿಸಿದರು.
ಇದೇ ಸಂದರ್ಭದಲ್ಲಿ ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜಾ ಕಾಪು ಶಾಸಕ ಲಾಲಾಜಿ ಮೆಂಡನ್ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪತಿ ಉಪಸ್ಥಿತರಿದ್ದರು..
ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ಸಚಿವರು ಬೆಳ್ಳಿಗೆ 11 ಘಂಟೆಗೆ ಕಂದಾಯ ಇಲಾಖೆ ಆಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.. ಕಂದಾಯ ಸಚಿವರಾಗಿ ಉಡುಪಿ ಜಿಲ್ಲೆಗೆ ಪ್ರಥಮ ಬಾರಿ ಆಗಮಿಸಿದ ಆರ್ ವಿ ದೇಶಪಾಂಡೆಯವರನ್ನ ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಮಲ್ಲಿಗೆ ಹಾರ ಹಾಕಿ ಸ್ವಾಗತ ಕೋರಿದರು.