ದೇವರುಗಳ ಚಿತ್ರಗಳಿರುವ ಪಟಾಕಿಗೆ ನಿರ್ಬಂಧ ಹೇರಿ

ದೀಪಾವಳಿ ಹಬ್ಬದ ನಿಮ್ಮಿತ್ತ ಮಾರುಕಟ್ಟೆಯಲ್ಲಿ ಹಿಂದೂ ದೇವರುಗಳ ಚಿತ್ರ ಇರುವ ಪಟಾಕಿಗಳ ಮೇಲೆ ನಿರ್ಬಂಧ ಹೇರಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಉಡುಪಿ ವತಿಯಿಂದ ಅಪರಾ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಲಾಯಿತು.

ದೀಪಾವಳಿ ಹಬ್ಬದ ನಿಮಿತ್ತ ಮಾರುಕಟ್ಟೆಯಲ್ಲಿ ಕೊಟ್ಯಾಂತರ ಹಿಂದೂಗಳ ಆರಾದ್ಯ ದೇವರುಗಳ ಚಿತ್ರ ಮತ್ತು ರಾಷ್ಟ್ರಪುರುಷರ ಚಿತ್ರಗಳಿರುವ ಪಟಾಕಿಯನ್ನು ಬಹಿರಂಗವಾಗಿ ಮಾರಾಟ ಮಾಡುತ್ತಿದ್ದು . ಇಂತಹ ಪಟಾಕಿಗಳನ್ನು ಸಿಡಿಸಿದ ನಂತರ ಪ್ಯಾಕೆಟಗಳ ಮೇಲಿನ ದೇವರುಗಳ ಹಾಗೂ ರಾಷ್ಟ್ರಪುರುಷರ ಚಿತ್ರವು ಛಿದ್ರವಾಗಿ ರಸ್ತೆಯ ತುಂಬಾ ಹರಡುತ್ತದೆ. ಜನರು ಕಾಲಿನಡಿಯಲ್ಲಿ , ವಾಹನದ ಅಡಿಯಲ್ಲಿ ಅಥವಾ ಕಸದ ಬುಟ್ಟಿ ಹಾಗೂ ಚರಂಡಿಯಲ್ಲಿ ಬೀಳುವುದು ಕಾಣುತ್ತದೆ. ಇದು ಹಿಂದೂ ದೇವರುಗಳ ಅಪಮಾನವಾಗಿದ್ದು ಮತ್ತು ರಾಷ್ಟ್ರಪುರುಷರ ಅಗೌರವವಾಗುತ್ತದೆ. ಇದು ಭಾರತೀಯ ದಂಡ ಸಂಹಿತೆಗನುಸಾರ `ಧಾರ್ಮಿಕ ಭಾವನೆಗೆ ಘಾಸಿ ಗೊಳಿಸುವುದು’ ಎಂಬ ಗಂಭೀರವಾದ ಅಪರಾಧವೇ ಆಗಿದೆ.

ಈಗಾಗಲೇ ಹಲವು ರಾಜ್ಯಗಳು, ಪಟಾಕಿಯಲ್ಲಿ ದೇವರ ಚಿತ್ರ ಮುದ್ರಿಸುವುದನ್ನು ನಿಷೇಧಿಸಿದೆ. ಹಾಗಾಗಿ ತಾವು ಸಹ ಇಂತಹ ಪಟಾಕಿಗಳ ಮೇಲೆ ನಿಷೇಧವನ್ನು ಹಾಕಬೇಕು ಮತ್ತು ಅದಕ್ಕೆ ಸಂಬಂದಿಸಿದವರಿಗೆ ಸೂಚನೆಯನ್ನು ನೀಡಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಉಡುಪಿ ವತಿಯಿಂದ ಅಪರಾ ಜಿಲ್ಲಾಧಿಕಾರಿಗಳಿಗೆ ಮನವಿಯಲ್ಲಿ ಕೋರಲಾಗಿದೆ.

ಈ ಮನವಿಯಲ್ಲಿ ಪರಿಸರಕ್ಕೆ ಹಾನಿಕಾರಕ ಚೀನಾ ನಿರ್ಮಿತ ವಿದೇಶಿ ಪಟಾಕಿಗಳ ಮಾರಾಟದ ಮೇಲೆ ನಿಷೇಧ ಮಾಡಲು ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೂಡ ಹೇಳಲಾಗಿದೆ. ಈ ಮನವಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ದೀಪಾವಳಿಯ ಸಮಯದಲ್ಲಿ ಚೈನಾ ನಿರ್ಮಿತ ಪಟಾಕಿಗಳು ದೊಡ್ಡ ಪ್ರಮಾಣದಲ್ಲಿ ಬರುತ್ತಿದೆ. ಇದರಲ್ಲಿ ವಿಷಕಾರಿ ಪದಾರ್ಥದ ಪ್ರಮಾಣವು ಹೆಚ್ಚು ಇರುತ್ತದೆ. ಅದನ್ನು ತಯಾರಿಸುವಾಗ ಪೊಟ್ಯಾಶಿಯಮ್ ಕ್ಲೊರೈಡ್' ಹಾಗೂಪೊಟ್ಯಾಶಿಯಮ್ ಪರಕ್ಲೊರೈಡ್’ ಈ ರಾಸಾಯನಿಕ ವಿಶ್ರಣವನ್ನು ಉಪಯೋಗಿಸಲಾಗುತ್ತದೆ; ಆದರೆ ಭಾರತದಲ್ಲಿ ಈ ರಾಸಾಯನಿಕ ಪದಾರ್ಥಗಳ ನಿಷೇಧ ಇದೆ. ಅದು ಅತ್ಯಂತ ಮಾಲಿನ್ಯಕಾರಿಯಾಗಿದೆ. ಈಗಾಗಲೇ ದೆಹಲಿ ಸೇರಿದಂತೆ, ಅನೇಕ ನಗರದಲ್ಲಿ ಚೀನೀ ಪಟಾಕಿಗಳ ಮೇಲೆ ಭಾರತ ಸರಕಾರವು ನಿರ್ಬಂಧವನ್ನು ಹೇರಿದೆ. `ಎಕ್ಸಪ್ಲೋಜಿವ್ ಆಕ್ಟ್ 2008′ ದ ಅನ್ವಯ ವಿದೇಶಿ ಸ್ಪೋಟಕಗಳನ್ನು ಇಟ್ಟುಕೊಳ್ಳುವುದು ಹಾಗೂ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಸರ್ವೋಚ್ಚ ನ್ಯಾಯಾಲಯವು ಸಹ ಹಾನಿಕಾರಕ ಪಟಾಕಿ ನಿಷೇಧ ಮಾಡಲು ಆದೇಶ ಮಾಡಿದೆ. ಈ ವರ್ಷ ಕರ್ನಾಟಕ ರಾಜ್ಯ ಒಳಡಾಳಿತ ಇಲಾಖೆ (ಕಾನೂನು ಸುವ್ಯವಸ್ಥೆ) ಚೀನಾ ನಿರ್ಮಿತ ಪಟಾಕಿ ಸೇರಿದಂತೆ ಯಾವುದೇ ದೇಶದ ಪಟಾಕಿಯ ಮೇಲೆ ಸಂಪೂರ್ಣ ನಿಷೇಧವನ್ನು ಹೇರಿದೆ. ಆದರೂ ಕೂಡ ಚೀನಿ ಪಟಾಕಿಯನ್ನು ಅಕ್ರಮವಾಗಿ ತಂದು ಮಾರಾಟ ಮಾಡಲಾಗುತ್ತಿದೆ. ಅದಕ್ಕಾಗಿ ಇಂತಹ ಪಟಾಕಿ ಮಾರಾಟ ಮಾಡುವವರ ಮತ್ತು ಉಪಯೋಗಿಸುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಹಾಗೂ ಜಿಲ್ಲೆಯಲ್ಲಿ ಇದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ.
ಸೌ ಪವಿತ್ರಾ ಕುಡ್ವಾರವರು ಮನವಿಯನ್ನು ಅಪರಾಜಿಲ್ಲಾಧಿಕಾರಿಗಳಿಗೆ ನೀಡಿದರು. ಈ ಸಂದರ್ಭದಲ್ಲಿ ಶ್ರೀಮತಿ ಮಾಯಾ, ಸೌ ಜ್ಯೋತಿ ವಿಶ್ವನಾಥ್ ರವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!