ರಾಜೀನಾಮೆ ನೀಡಿದ ಅಭ್ಯರ್ಥಿಗಳೇ ಕ್ಷೇತ್ರದ ಚುನಾವಣಾ ವೆಚ್ಚವನ್ನು ಭರಿಸಲಿ : ಅಬ್ದುಲ್ ರೆಹಮಾನ್

ರಾಜೀನಾಮೆ ನೀಡುವ ಶಾಸಕರು, ತಮ್ಮ ಕ್ಷೇತ್ರದಲ್ಲಿ ಮತ್ತೆ ಚುನಾವಣೆ ನಡೆಸಿ ಜನರ ತೆರಿಗೆ ಹಣ ಪೋಲು ಮಾಡುವ ಬದಲು, ಹಿಂದಿನ ಚುನಾವಣೆಯಲ್ಲಿ ದ್ವಿತೀಯ ಸ್ಥಾನ ಪಡೆದ ಅಭ್ಯರ್ಥಿಯನ್ನು ವಿಧಾನಸಭೆ ಸದಸ್ಯರೆ೦ದು ಆಯ್ಕೆ ಮಾಡಬೇಕು ಎಂದು ಯುವ ಕಾಂಗ್ರೆಸ್ ಉಡುಪಿ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಮತ್ತು ಕಾನೂನು ವಿದ್ಯಾರ್ಥಿ ಅಬ್ದುಲ್ ರೆಹಮಾನ್ ಮನವಿ ಮಾಡಿದ್ದಾರೆ.

ವರ್ಷಂಪ್ರತಿ ಚುನಾವಣೆ ನಡೆಸುವುದರಿಂದ ಜನರ ತೆರಿಗೆ ಹಣ ಪೋಲಾಗುತ್ತಿದೆ, ಮಾತ್ರವಲ್ಲದೇ ಜನಸಾಮಾನ್ಯರ ಮೇಲೆ ಹೊರೆಯಾಗುತ್ತಿದೆ. ಇದನ್ನು ತಪ್ಪಿಸುವುದಕ್ಕಾಗಿ ರಾಜೀನಾಮೆ ನೀಡುವ ಅಭ್ಯರ್ಥಿಗಳನ್ನು ಮತ್ತೆ ಚುನಾವಣೆಗೆ ಸ್ಪರ್ಧಿಸದ೦ತೆ ಮತ್ತು ಚುನಾವಣೆ ನಡೆದಾಗ ಅದರ ವೆಚ್ಚವನ್ನು ಅವರೇ ಭರಿಸುವಂತೆ ಕಾನೂನು ರೂಪಿಸಬೇಕಾಗಿದೆ ಎಂದು ಅಬ್ದುಲ್ ರೆಹಮಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2 thoughts on “ರಾಜೀನಾಮೆ ನೀಡಿದ ಅಭ್ಯರ್ಥಿಗಳೇ ಕ್ಷೇತ್ರದ ಚುನಾವಣಾ ವೆಚ್ಚವನ್ನು ಭರಿಸಲಿ : ಅಬ್ದುಲ್ ರೆಹಮಾನ್

Leave a Reply

Your email address will not be published. Required fields are marked *

error: Content is protected !!