ಶಾಸಕ ಆನಂದ ಸಿಂಗ್ ರಾಜೀನಾಮೆ? ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಬಿರುಸು

ಬೆಂಗಳೂರು: ಬಳ್ಳಾರಿಯ ವಿಜಯನಗರ ಕಾಂಗ್ರೆಸ್‌ ಶಾಸಕ ಆನಂದ್‌ ಸಿಂಗ್‌ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ರಾಜ್ಯ ರಾಜಕೀಯದಲ್ಲಿ ಸಂಚನ ಸೃಷ್ಟಿಯಾಗಿದೆ. ಆದರೆ, ಸ್ಪೀಕರ್‌ ಮಾತ್ರ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದು, “ನನಗ್ಯಾವ ಶಾಸಕರೂ ರಾಜೀನಾಮೆ ನೀಡಿಲ್ಲ” ಎಂದು ಹೇಳಿರುವುದು ರಾಜಕೀಯ  ರಂಗದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. 

ಆನಂದ್‌ ಸಿಂಗ್‌ ಅವರು ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್‌ ಅವರ ಕಾರ್ಯದರ್ಶಿಗೆ ತಲುಪಿಸಿದ್ದಾರೆ ಎನ್ನಲಾಗಿದೆ. ಆದರೆ, ಸ್ಪೀಕರ್‌ ಅವರು ಇದನ್ನು ನಿರಾಕರಿಸಿದ್ದಾರೆ. ನನ್ನನ್ನು ಯಾರೂ ಭೇಟಿಯಾಗಿ ರಾಜೀನಾಮೆ ಕೊಟ್ಟಿಲ್ಲ. ಒಂದು ವೇಳೆ ಯಾವುದೇ  ಶಾಸಕ ರಾಜೀನಾಮೆ ನೀಡಿದರೆ, ಪರಾಮರ್ಶೆ ಮಾಡಿ ಅಂಗೀರಿಸಲಾಗುವುದು ಎಂದು ಅವರು  ಹೇಳಿದ್ಧಾರೆ. 

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ ಬಯಸುವ ಯಾವುದೇ ಶಾಸಕ ಖುದ್ದಾಗಿ ಸ್ಪೀಕರ್‌ ಅವರನ್ನು ಭೇಟಿಯಾಗಿ, ಕಾರಣ ಸಹಿತ ರಾಜೀನಾಮೆ ಪತ್ರ ನೀಡಬೇಕು. ನಂತರ ಅದನ್ನು  ಪರಾಮರ್ಶೆ ನಡೆಸಿ ಸ್ಪೀಕರ್‌ ಅವರು ಅಂಗೀಕರಿಸುತ್ತಾರೆ. ಆದರೆ, ಸದ್ಯ ಆನಂದ್‌ ಸಿಂಗ್‌ ಅವರು ಸ್ಪೀಕರ್‌ ಅವರ ಕಾರ್ಯದರ್ಶಿಗೆ ಪತ್ರ ನೀಡಿರುವುದರಿಂದ ಅದನ್ನು ಪರಿಗಣನೆಗೆ  ಪಡೆಯುವ ಸಾಧ್ಯತೆಗಳಿಲ್ಲ ಎಂದು ಹೇಳಲಾಗುತ್ತದೆ

ಈ ನಡುವೆ ಬಿಜೆಪಿ ಪಾಳಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಮಾಜಿ ಸಿಎಂ  ಯಡಿಯೂರಪ್ಪ ಅವರು ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸುತ್ತಿದ್ದು, ಇದರಲ್ಲಿ  ಮಹತ್ವದ ರಾಜಕೀಯ ಅಂಶಗಳು ಹೊರಬೀಳುವ ಸಾಧ್ಯತೆಗಳಿವೆ ಎಂಬ ನಿರೀಕ್ಷೆಗಳಿವೆ. 

ಇನ್ನು, ಕಳೆದ ತಿಂಗಳು 27ರಂದು ಸಚಿವ ಎಂ.ಬಿ ಪಾಟೀಲ ಅವರಿಗೆ ಪತ್ರ ಬರೆದಿರುವ  ಆನಂದ್‌ ಸಿಂಗ್‌ ಅವರು ಜಿಂದಾಲ್‌ ಸಂಸ್ಥೆಗೆ ಭೂಮಿ ನೀಡುತ್ತಿರುವುದನ್ನು ವಿರೋಧಿಸಿ  ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!