ಖ್ಯಾತ ಕೊಂಕಣಿ ಬರಹಗಾರ ರಿಚರ್ಡ್ ಜಾನ್ ಪಾಯಾಸ್ ಇನ್ನಿಲ್ಲ

ಮಂಗಳೂರು : ಖ್ಯಾತ ಕೊಂಕಣಿ ಬರಹಗಾರರು, ನಾಟಕಗಾರರು, ದಾಯ್ಜಿವರ್ಲ್ಡ್‌ನ ಸಂಪಾದಕೀಯ ಮುಖ್ಯಸ್ಥರಾಗಿದ್ದ ರಿಚರ್ಡ್ ಜಾನ್ ಪಾಯಾಸ್ (51) ಕಳೆದ 74 ದಿನಗಳಿಂದ ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದ ಇವರು ಭಾನುವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ಆರ್. ಜೆ. ಪಿ. ಎಂದೇ ಪ್ರಸಿದ್ಧರಾಗಿರುವ ರಿಚ್ಚಿಯವರು 2015 ರಲ್ಲಿ ಹಿರಿಯ ಸಂಪಾದಕರಾಗಿ ದಾಯ್ಜಿವರ್ಲ್ಡ್‌ಗೆ ಸೇರಿದ್ದು ಕಳೆದ 2 ವರ್ಷದಿಂದ ಸಂಪಾದಕೀಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ರಿಚ್ಚಿ ಅವರ ಪ್ರಬಂಧಗಳು, ವಿಶೇಷವಾಗಿ ಪ್ರಚಲಿತ ವಿದ್ಯಾಮಾನದ ವಿಡಂಬನಾತ್ಮಕ ಲೇಖನಗಳು ಕೊಂಕಣಿಯಲ್ಲಿ ಹೆಚ್ಚು ಜನಪ್ರಿಯವಾಗಿದ್ದವು. ಅವರ ಸಣ್ಣ ಕಥೆಗಳು ಹಾಗೂ ಕವನಗಳು ಕೊಂಕಣಿ ನಿಯತಕಾಲಿಕಗಳಲ್ಲಿ ನಿಯಮಿತವಾಗಿ ಪ್ರಕಟವಾಗುತ್ತಿದವು. ಕೊಂಕಣಿಯಲ್ಲಿನ ವಿಡಂಬನಾತ್ಮಕ ಪ್ರಬಂಧಗಳ ಸಂಗ್ರಹವಾದ ಅವರ ಮೊದಲ ಪುಸ್ತಕ ಕೊಲೊವೆರಿ 2012ರಲ್ಲ ಪ್ರಕಟವಾಯಿತು. ಅಲ್ಲದೇ ಅವರ ಎರಡು ಪುಸ್ತಕಗಳಾದ ವಿದುಷಕ್ ಹಾಗೂ ಫಾಥರ್ ಪುಸ್ತಕಗಳನ್ನು ಪ್ರಕಟಿಸಿದರು. ಜನವರಿ2020 ರಲ್ಲಿ ರಿಚ್ಚಿ ಅವರು ಬರೆದ ಫಾಥರ್‌ಗೆ ಪ್ರತಿಷ್ಠಿತ ಟಿಎಂಪೈ ಪ್ರಶಸ್ತಿ ಒಳಿದಿತ್ತು.


ನಾಟಕಕಾರರಾಗಿ ರಿಚ್ಚಿ ಅವರು ಕೊಂಕಣಿವೇದಿಕೆಯಲ್ಲಿ ತಮಗಾಗಿ ಒಂದು ಗೂಡನ್ನು ರಚಿಸಿಕೊಂಡಿದ್ದರು. ಅವರ ನಾಟಕವಾದ ಪಾಂಚ್ ಮೊರ್ನಮ್ ಕೊಂಕಣಿ ರಂಗಭೂಮಿಯಲ್ಲಿ ಟ್ರೆಂಡ್‌ಸೆಟ್ಟರ್ ಆಗಿ ಮಾರ್ಪಟ್ಟಿತ್ತು. ಇವರ ಎರಡನೇ ನಾಟಕ ತುಮ್ ವೋರ್ಟೊ ದೋನಿಯಾ (ಲಾರ್ಡ್, ಯು ಆರ್ ಗ್ರೇಟ್) ನಾಟಕವು ಹಳೆಯ ಒಡಂಬಡಿಕೆ ಬುಕ್ ಆಫ್ ಜಾಬ್ ಆಧರಿಸಿದ್ದು, ಈ ನಾಟಕ ಕರಾವಳಿಯ ವಿವಿಧ ಕಡೆಗಳಲ್ಲಿ ಹಲವಾರು ಪ್ರದರ್ಶನಗಳನ್ನು ಕಂಡಿತ್ತು. ಅಲ್ಲದೇ ಅದ್ಬುತ ಯಶಸ್ಸನ್ನು ಸಾಧಿಸಿತ್ತು. ಮೃದು ಸ್ವಭಾವದ ಹಾಗೂ ನೇರ ವ್ಯಕ್ತಿತ್ವದ ರಿಚ್ಚಿ ಅವರು, ಬೆಳೆಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿದ್ದರು ಅಲ್ಲದೇ ಕೊಂಕಣಿ ನಾಟಕದಲ್ಲಿ ಹೊಸತನವನ್ನು ತಂದಿದ್ದರು.

ಡಿಸೆಂಬರ್2019 ರ ಮೊದಲ ವಾರದವರೆಗೂ ಆರೋಗ್ಯವಾಗಿದ್ದ ರಿಚ್ಚಿ ಅವರಿಗೆ ಆಸಿಡಿಟಿ ಹಾಗೂ ವಾಂತಿ ಕಾಣಿಸಿಕೊಂಡಿತ್ತು. ಒಂದು ವಾರದ ಬಳಿಕ ವಾಂತಿ ನಿಯಂತ್ರಣಕ್ಕೆ ಬಾರದೇ ಇದ್ದಾಗ ಅವರನ್ನು ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ ಬಳಿಕ ಅವರಿಗೆ ಕಾರ್ಸಿನೋಮ ಮೆಟಾಸ್ಟಾಟಿಕ್ ಜಾಂಡೀಸ್ ಒಂದು ರೀತಿಯ ಕ್ಯಾನ್ಸರ್ ಇರುವುದು ತಿಳಿದುಬಂತು.

ರಿಚ್ಚಿ ಅವರು ಧನಾತ್ಮಕ ಚಿಂತನೆಯಲ್ಲಿ ಹೋರಾಟ ನಡೆಸಿದರು ಹಾಗೂ ಗುಣಮುಖರಾಗುವ ಭರವಸೆ ಹೊಂದಿದ್ದರು. ಕ್ಯಾನ್ಸರ್ ವಿರುದ್ದ ನಡೆಸಿದ ಹೋರಾಟವನ್ನು ವ್ಯಕ್ತಪಡಿಸುವ ಕೆಲವು ಭಾವನಾತ್ಮಕ ಕೊಂಕಣಿ ಕವಿತೆಗಳನ್ನು ಕೂಡಾ ಬರೆದಿದ್ದಾರೆ. ಕಳೆದ ಎರಡು ದಿನಗಳಿಂದ ಅವರ ಆರೋಗ್ಯ ಹದಗೆಟ್ಟಿದ್ದು ಭಾನುವಾರ ಮುಂಜಾನೆ ೪.೩೦ರ ಸುಮಾರಿಗೆ ನಿಧನರಾದರು. ರಿಚರ್ಡ್ ಜಾನ್ ಪೈಸ್ ಅವರು ಕೊಂಕಣಿ ಹಾಗೂ ಇಂಗ್ಲೀಷ್ ಸಾಹಿತ್ಯಕ್ಕೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆ.

ಕಾನ್ಸರ್‌ನಿಂದಾಗಿ ಬಳಲುತ್ತಿದ್ದ ಅವರಿಗೆ ತಾಯಿ, ಪತ್ನಿ, ಇಬ್ಬರು ಮಕ್ಕಳ ಅಗಲಿದ್ದಾರೆ.

ಅಂತ್ಯಕ್ರಿಯೆ ಮಾರ್ಚ್ 2 ರ ಸೋಮವಾರ ನಡೆಯಲಿದ್ದು, ಮಧ್ಯಾಹ್ನ 2.45 ರಿಂದ ರೊಸಾರಿಯೋ ಕ್ಯಾಥೆಡ್ರಲ್‌ನಲ್ಲಿ ಸಾರ್ವಜನಿಕ ವೀಕ್ಷಣೆ ಮತ್ತು ಮಧ್ಯಾಹ್ನ 3.30 ಕ್ಕೆ ಜೆಪ್ಪುವಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

1 thought on “ಖ್ಯಾತ ಕೊಂಕಣಿ ಬರಹಗಾರ ರಿಚರ್ಡ್ ಜಾನ್ ಪಾಯಾಸ್ ಇನ್ನಿಲ್ಲ

Leave a Reply

Your email address will not be published. Required fields are marked *

error: Content is protected !!