ಪೊಲೀಸ್ರ ಮಾಂಸಾಹಾರಿ ಊಟದ ಆಸೆಯೂ… ನಿರಾಶ್ರಿತರ ಉಪವಾಸವೂ…
ಕುಂದಾಪುರ: (ಉಡುಪಿ ಟೈಮ್ಸ್ ವರದಿ) ಇಲ್ಲಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ಒಂದಾದ ಪಾರಿಜಾತ ಹೋಟೆಲ್ ಲಾಕ್ ಡೌನ್ ನಿಂದ ಅನೇಕ ವಲಸೆ ಕಾರ್ಮಿಕರಿಗೆ, ಸರಕಾರಿ ಅಧಿಕಾರಿಗಳಿಗೆ , ಕುಂದಾಪುರ ಹಾಗು ಬೈಂದೂರಿನ ಮೂಲೆ ಮೂಲೆಯಲ್ಲಿ ಇರುವ ಪೊಲೀಸ್ ಠಾಣೆಗಳಿಗೆ ಉಚಿತ ಊಟ , ಬೆಳಿಗ್ಗಿನ ಉಪಹಾರ , ಟೀ, ಬಿಸ್ಕಸ್ತ್ ,ಹಣ್ಣುಗಳನ್ನು ವಿತರಿಸುತ್ತಿದ್ದರು.
ಸುಮಾರು 8 ದಿನ ಉಚಿತ ಊಟ ಮಾಡಿದ ಅಧಿಕಾರಿ ವರ್ಗ ಇದೀಗ ದರ್ಪ ಮೆರೆದಿದ್ದು ಊಟ ನೀಡಿದವರಿಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ಹೋಟೆಲ್ ನ ಊಟದ ಅಡುಗೆಯಲ್ಲಿ ನಿರತರಾದ ಸಿಬ್ಬಂದಿಗಳಿಗೆ ಏಕಾಏಕಿ ಪೊಲೀಸ್ ಅಧಿಕಾರಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಹಾಗು ಆರೋಗ್ಯ ಅಧಿಕಾರಿ ಊಟದಲ್ಲಿ ವಿಷ ಬೆರಿಸಿದರೆ ಏನು ಮಾಡೋದು ಎಂಬ ಮಾತುಗಳನ್ನಾಡಿದ್ದಾರೆ. ಇದರಿಂದ ಬೇಸತ್ತ ಪಾರಿಜಾತ ಹೋಟೆಲ್ ನ ಮಾಲೀಕರು ಉಚಿತ ನೀಡುವುದನ್ನು ನಿಲ್ಲಿಸಿದ್ದಾರೆ.
ಇದಕ್ಕೆಲ್ಲ ಕಾರಣ ಪೊಲೀಸ್ ಠಾಣೆಗಳಿಗೆ ಹಂಚಲಾದ ಮಾಂಸಾಹಾರಿ ಊಟ. ಇಷ್ಟಕ್ಕೂ ಬುಧವಾರ ಚಿಕ್ಕನ್ ಊಟ ಹಂಚಿದವರು ಯಾರು ಎಂಬ ವಿಚಾರ ಇನ್ನಷ್ಟೇ ಬೆಳಕಿಗೆ ಬರಬೇಕಾಗಿದೆ. ಅದೇನೇ ಇರಲಿ ಕೇವಲ ಒಂದು ಚಿಕ್ಕನ್ ಊಟಕ್ಕಾಗಿ 8 ದಿನ ಉಚಿತ ಊಟ ನೀಡಿದವರಿಗೆ ಅಗೌರವ ತೋರುವುದು ಎಷ್ಟು ಸರಿ ?
ಒಟ್ಟಾರೆಯಾಗಿ ಅಧಿಕಾರಿಗಳ ದುರಹಂಕಾರದಿಂದಾಗಿ ಕೊರೋನಾ ನಿರಾಶ್ರಿತರಿಗೆ ಉಚಿತ ಊಟ ಸಿಗದಂತೆ ಆಗಿದೆ. ಆದರೆ ತಮ್ಮ ತಪ್ಪನ್ನು ಒಪ್ಪಿಕೊಳ್ಳದ ಪೊಲೀಸ್ ಅಧಿಕಾರಿಗಳು ಬೇರೇನೇ ಕಥೆಹೇಳುತ್ತಿದ್ದಾರೆ. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಹೋಟೆಲ್ ಮಾಲೀಕರು ಹಾಗು ಅಧಿಕಾರಿಗಳ ಸಮರದಲ್ಲಿ ನಿರಾಶ್ರಿತರಿಗೆ ಅನ್ನ ಇಲ್ಲದಂತೆ ಆಗಿರುವುದಂತು ಹೌದು. ಅಧಿಕಾರಿಗಳ ಈ ದುರ್ವರ್ತನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
One of the best person in Kundapura …Ram chandra bhatt helping the people in critical suitation…..we have to support him and his team…. some people are stopping them by spreading non sense news.. according to me some political persons behind this due to bhatt sir publicity…
I support Ram sir
Jai Karnataka jai Kundapura