ಕಾಟಿಪಳ್ಳ ಲೀಲಾ ಶೆಟ್ಟಿ ಕುಡ್ಲದ ರಾನು ಮಂಡಲ್
ಮಂಗಳೂರು- ಈಚೆಗೆ ಲತಾ ಮಂಗೇಶ್ಕರ್ ಅವರಂತೆ ಹಾಡಿ ಸೋಶಿಯಲ್ ಮೀಡಿಯಾ ಹೀರೋಯಿನ್ ಆಗಿ ಸುದ್ದಿಗೆ ಬಂದು ಹೊಸ ಬದುಕು ಕಂಡಿರುವ ರಾನು ಮಂಡಲ್ ಎಂಬ ರೈಲು ನಿಲ್ದಾಣದ ಭಿಕ್ಷುಕಿಯ ಕಥೆ ನಿಮಗೆಲ್ಲ ಗೊತ್ತು. ಆಕೆಯ ಪ್ರತಿಭೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿ ಆಕೆಗೆ ಅಭಿಮಾನಿಗಳೂ ಹುಟ್ಟುಕೊಂಡಿದ್ದರು. ಇದೆಲ್ಲ ದೂರದ ಕಥೆಯಾದರೆ, ಈಗ ಇಂಥದ್ದೇ ಹಾಡುಗಳ ಮೂಲಕ ನಮ್ಮೂರಿನ ಹಿರಿಯ ಮಹಿಳೆಯೋ ರ್ವರು ಸುದ್ದಿಗೆ ಬಂದಿದ್ದಾರೆ. ಇವರ ಹೆಸರು ಲೀಲಾ ಶೆಟ್ಟಿ. ಊರು ಸುರತ್ಕಲ್ ಸಮೀಪದ ಕಾಟಿಪಳ್ಳದ ಮೂರನೇ ಬ್ಲಾಕ್ ನಿವಾಸಿ . ಬಹುಭಾಷಾ ಹಾಡುಗಳ ಮೂಲಕ ಗಮನ ಸೆಳೆಯುವ ಕಾಟಿಪಳ್ಳ ಈ ಹಿರಿಯ ಮಹಿಳೆ ಲೀಲಾ ಶೆಟ್ಟಿ ಅವರ ಪ್ರಾಯ 61 ವರ್ಷ. ಆದರೆ ಅವರು ಯುವ ಸಂಗೀತಗಾರರು ನಾಚುವಂತೆ ಹಿಂದಿ, ಕನ್ನಡ, ತುಳು ಸಹಿತ ಹಲವು ಭಾಷೆಯ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದಾರೆ. ಇವರ ಹಾಡುಗಳ ತುಣುಕುಗಳು ಈಗ ಭರ್ಜರಿ ವೈರಲ್ ಆಗಿದ್ದು, ಇದಕ್ಕೆ ಕಾರಣರಾದವರು ಕೃಷ್ಣಾಪುರದ ರವೀಂದ್ರ ಆಚಾರ್ಯ ಎಂಬವರು.
ಲೀಲಾ ಶೆಟ್ಟಿಯ ಹಾಡುಗಳನ್ನು ರವೀಂದ್ರ ಆಚಾರ್ಯ ಅವರು ರೆಕಾರ್ಡ್ ಮಾಡಿ ವಾಟ್ಸಪ್ ಮೂಲಕ ಮಿತ್ರರಿಗೆ ಕಳುಹಿಸಿದ್ದಾರೆ.
ಅದೀಗ ಕೆಲವು ಗ್ರೂಪ್‌ಗಳಲ್ಲಿ ವೈರಲ್ ಆಗಿದ್ದು, ಮುಂದಿನ ದಿನದಲ್ಲಿ ರಾನು ಮಂಡಲ್‌ನಂತೆ ಪ್ರಚಾರ ಪಡೆದುಕೊಂಡರೆ ಆಶ್ಚರ್ಯವಿಲ್ಲ. ಇವರಿಗೆ ಎಲ್ಲರ ಪ್ರೋತ್ಸಾಹ ಹಾಗೂ ಬೆಂಬಲ ಅಗತ್ಯವಾಗಿದೆ.
Good effort to show the tallent via news… Dear team, could you please publish some her sang songs