ಮಳೆ ಹಾನಿ – ಸ್ಥಳಕ್ಕೆ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಭೇಟಿ
ಬೈರಂಪಳ್ಳಿ: ಮಂಗಳವಾರ ಮಧ್ಯಾಹ್ನ ದಿಂದ ಸುರಿದ ಅತೀವ ಮಳೆಯಿಂದಾಗಿ ಪೆರ್ಡೂರು ಗ್ರಾಮದ ಭೈರಂಪಳ್ಳಿ ಸಮೀಪದ ಕಂಚಿಗುಂಡಿಯ ಸುಮಾರು 40ವರ್ಷ ಹಳೆಯ ನೀರು ಹರಿಯುವ ಪೈಪ್ ನ ಮೇಲೆ ಹಾದುಹೋಗುವ ಸಾರ್ವಜನಿಕ ರಸ್ತೆಯು ಕೊಚ್ಚಿ ಹೋಗಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಿದೆ. ನೀರಿನಿಂದ ಸುತ್ತಲಿನ ರೈತರ ಬೆಳೆಗೆ ಅಪಾರ ಹಾನಿಯಾಗಿದ್ದು ಸುಮಾರು 25 ಎಕರೆ ಗದ್ದೆಗಳ ಕಟಾವಾದ ಬೆಳೆ ನೀರಿನಲ್ಲಿ ಕೊಚ್ಚಿ ನಷ್ಟವಾಯಿತು .
ಮಳೆಯಿಂದ ಸಂತ್ಯರು ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗೋಡೆ ಕುಸಿದು ಬಿದ್ದಿದೆ. ಘಟನಾ ಸ್ಥಳಕ್ಕೆ ಜೆಡಿಎಸ್ ಜಿಲ್ಲಾಧ್ಯಾಕ್ಷರಾದ ಯೋಗೀಶ್.ವಿ.ಶೆಟ್ಟಿ ಪಕ್ಷದ ನಾಯಕರೊಡನೆ ಭೇಟಿ ನೀಡಿ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿ, ಅತೀ ಶ್ರೀಘ್ರದಲ್ಲಿ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಹಾಗೂ ರೈತರಿಗೆ ಸೂಕ್ತ ಪರಿಹಾರವನ್ನು ಶೀಘ್ರದಲ್ಲಿ ನೀಡುವ ನಿಟ್ಟಿನಲ್ಲಿ ಸರಕಾರವನ್ನು, ಜಿಲ್ಲಾಡಳಿತವನ್ನು, ಅಧಿಕಾರಿಗಳನ್ನು ಹಾಗೂ ಸ್ಥಳೀಯ ಶಾಸಕರನ್ನು ಒತ್ತಾಯಿಸಿದ್ದಾರೆ.
ಇನ್ನು ಮುಂದೆ ಅಲ್ಲಿನ ಸ್ಥಳೀಯರಿಗೆ ಹಾಗೂ ರೈತರಿಗೆ ಯವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.