ಹೆಬ್ರಿ: ‘ಕಾಂಗ್ರೆಸ್ ನಡಿಗೆ ಶೂನ್ಯದ ಕಡೆಗೆ’ ಸಚಿವ ಆರ್.ಅಶೋಕ್
ಉಡುಪಿ: ಉಪ ಚುನಾವಣೆಯಲ್ಲಿ ಬಿಜೆಪಿ 14ರಿಂದ 15 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ.ಫಲಿತಾಂಶದ ಬಳಿಕ ಕಾಂಗ್ರೆಸ್ ನಡಿಗೆ ಶೂನ್ಯದ ಕಡೆಗೆ ಸಾಗಲಿದ್ದು, ಕಾಂಗ್ರೆಸ್‌ನಾಯಕರನ್ನು ಮನೆಗೆ ಕಳುಹಿಸುವ ಫಲಿತಾಂಶ ಬರುತ್ತದೆ. ಸಿದ್ದರಾಮಯ್ಯ ವಿಪಕ್ಷ ನಾಯಕಸ್ಥಾನವನ್ನೂ ತ್ಯಾಗ ಮಾಡಬೇಕಾಗಬಹುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.ಹೆಬ್ರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತುಜೆಡಿಎಸ್ ಮತ್ತೊಮ್ಮೆ ಒಂದಾಗಿ ಸರ್ಕಾರ ರಚನೆ ಮಾಡುವುದು ಕೇವಲ ಭ್ರಮೆ. ಮೈತ್ರಿಸರ್ಕಾರದ ದುರಾಡಳಿತ, ಸ್ವಜನ ಪಕ್ಷಪಾತದಿಂದ ಜನರು ಈಗಾಗಲೇ ರೋಸಿ ಹೋಗಿದ್ದು, ಮತದಾರರುಬಿಜೆಪಿ ಸರ್ಕಾರವನ್ನೇ ಮುಂದುವರಿಸಲು ತೀರ್ಮಾನಿಸಿದ್ದಾರೆ. ಹಾಗಾಗಿ ಬಿಜೆಪಿಗೆಬಹುಮತಕ್ಕಿಂತ ಹೆಚ್ಚಿನ ಸ್ಥಾನ ದೊರಕುವುದು ನೂರಕ್ಕೆ ನೂರು ಖಚಿತ. ಸಮೀಕ್ಷೆಗಳಲ್ಲೂಬಿಜೆಪಿ ಗೆಲುವು ಸಾಧಿಸಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದರು.ದೇವೇಗೌಡರು ಕೂಡಾ ಕಾಂಗ್ರೆಸ್ ಜತೆಗೆ ಹೋಗಲ್ಲ ಎಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆಸೋತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಎರಡು ಭಾಗಗಳಾಗಿವೆ. ಸದ್ಯಎರಡೂ ಪಕ್ಷಗಳು ಒಡೆದು ನಾಲ್ಕು ಪಾರ್ಟಿಗಳಾಗಿವೆ. ಈ ನಾಲ್ಕುಪಾರ್ಟಿ ಒಂದಾಗೋದುಯಾವಾಗ?. ನಾಯಕನನ್ನು ಆಯ್ಕೆ ಮಾಡೋದು ಯಾವಾಗ ಎಂದು ಪ್ರಶ್ನಿಸಿದ ಸಚಿವರು,ಕಾಂಗ್ರೆಸ್ ಸರ್ಕಾರ ರಚಿಸುವ ಭ್ರಮಾಲೋಕದಲ್ಲಿದೆ. ಅವರು ಭ್ರಮಾಲೋಕದಲ್ಲೇ ಇರಲಿ ಎಂದುಕುಟುಕಿದರು. ಶಿವಸೇನೆಯಿಂದ ಬೆಳಗಾವಿ ಗಡಿ ಕ್ಯಾತೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನಮ್ಮಗಡಿಯ ತಂಟೆಗೆ ಬಂದರೆ ನಾವಂತೂ ಸುಮ್ಮನಿರಲ್ಲ. ಗಡಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ.ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಅದರ ಬಗ್ಗೆ ಕ್ಯಾತೆ ತೆಗೆದು ರಾಜಕೀಯ ದೊಂಬರಾಟಮಾಡಬೇಡಿ. ಮಾಡಿದರೆ ಅದಕ್ಕೆ ಹೇಗೆ ತಿರುಗೇಟು ಕೊಡಬೇಕೆಂಬುವುದು ನಮಗೆ ಚೆನ್ನಾಗಿಗೊತ್ತಿದೆ ಎಂದು ಎಚ್ಚರಿಕೆ ನೀಡಿದರು. ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆನೀಡಲಾಗುವುದು. ರಾಜ್ಯ ಸರ್ಕಾರಕ್ಕೆ ಈ ವಿಚಾರದಲ್ಲಿ ಬದ್ದತೆ ಇದೆ. ಸರೋಜಿನಿ ಮಹಿಷಿವರದಿಯನ್ನೂ ಪರಿಗಣಿಸಿ ಕನ್ನಡಕ್ಕೆ ಅಗ್ರಸ್ಥಾನ ನೀಡುತ್ತೇವೆ. ಖಾಸಗಿ ವಲಯದಲ್ಲೂಕನ್ನಡಿಗರಿಗೆ ಆದ್ಯತೆ ಸಿಗಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯವೂ ಆಗಿದೆ ಎಂದರು.ಹೈದರಾಬಾದ್ ಎನ್‌ಕೌಂಟರ್ ಘಟನೆಗೆ ಇಡೀ ದೇಶದ ಜನರು ಮೆಚ್ಚುಗೆವ್ಯಕ್ತಪಡಿಸಿದ್ದಾರೆ. ನ್ಯಾಯ ವಿಳಂಬ ಆಗುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆಆಗುತ್ತಿಲ್ಲ ಎಂಬ ಅಭಿಪ್ರಾಯ ಸರಿಯಲ್ಲ. ನ್ಯಾಯ ಪರಿಪಾಲನೆ ಹೇಗೆ ಮಾಡಬೇಕೆಂಬುವುದನ್ನುನ್ಯಾಯಾಲಯ ತೀರ್ಮಾನ ಮಾಡುತ್ತದೆ. ಎನ್‌ಕೌಂಟರ್ ಬಗ್ಗೆ ಅಲ್ಲಿನ ಸರ್ಕಾರನೋಡಿಕೊಳ್ಳುತ್ತದೆ. ಆದರೆ ಸ್ವಯಂ ರಕ್ಷಣೆಗೆ ಪೊಲೀಸರು ಈ ತೀರ್ಮಾನ ಕೈಗೊಂಡಿದ್ದಾರೆ.ತನಿಖೆಯ ನಂತರ ಎಲ್ಲಾ ಸತ್ಯಸಂಗತಿಗಳು ಬೆಳಕಿಗೆ ಬರುತ್ತದೆ. ನಮ್ಮಲ್ಲರ ದೃಷ್ಟಿಯಿಂದ ಈಕ್ರಮ ಸ್ವಾಗತಾರ್ಹ ಎಂದು ತಿಳಿಸಿದರು. |