ಕೊರೋನಾ ಪಾಸಿಟಿವ್ ಬಂದಾತನೇ ಎಲ್ಲಾ ಕ್ವಾರಂಟೈನ್ ಗಳ ಚಿಕಿತ್ಸಾ ವೆಚ್ಚ ಭರಿಸಬೇಕು: ಡಿಸಿ
ಉಡುಪಿ: (ಉಡುಪಿ ಟೈಮ್ಸ್ ವರದಿ) ದೆಂದೂರುಕಟ್ಟೆಯ ನಿವಾಸಿ ಕೊರೋನಾ ಪಾಸಿಟಿವ್ ಬಂದಾತ ಹೋಮ್ ಕ್ವಾರಂಟೈನ್ ಉಲ್ಲಂಘಿಸಿದ್ದಕ್ಕಾಗಿ ಆತನ ಸಂಪರ್ಕಕ್ಕೆ ಬಂದ ಎಲ್ಲ ರೋಗಿಗಳ ವೆಚ್ಚ ಆತನೇ ಭರಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದ್ದಾರೆ.
ಅವರು ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದುಬೈನಿಂದ ಆಗಮಿಸಿ ಹೋಮ್ ಕ್ವಾರಂಟೈನ್ ಆದೇಶವನ್ನು ಉಲ್ಲಂಘಿಸಿದ್ದು, ಮನೆಯಲ್ಲಿ ಇರಬೇಕಾದ ವ್ಯಕ್ತಿ ಎಲ್ಲರ ಜೊತೆಯಲ್ಲಿ ಸೇರಿ ಕ್ರಿಕೆಟ್ , ಪಾರ್ಟಿ, ಕೋಳಿ ಅಂಕ, ಈಜಾಡಲು ಹೋಗಿ ಆರೋಗ್ಯ ಇಲಾಖೆ ಸೂಚನೆ ಉಲ್ಲಂಘನೆ ಮಾಡಿದ್ದಾನೆ. ಆದ್ದರಿಂದ ಅವನ ಸಂಪರ್ಕಕ್ಕೆ ಬಂದ ಎಲ್ಲಾ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಬೇಕಾಗಿದೆ. ಅದಕ್ಕೆ ತಗಲುವ ಎಲ್ಲಾ ವೆಚ್ಚವನ್ನು ಆತನಿಂದನೆ ವಸೂಲಿ ಮಾಡಲಾಗುವುದು ಎಂದರು. ಅಲ್ಲದೆ ಅಂತಹ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಕೇಸು ದಾಖಲಿಸುತ್ತೇವೆ ಎಂದರು. ಈ ರೀತಿ ಕಾನೂನು ಉಲ್ಲಂಘಿಸಿದವರಿಗೆ ಎರಡು ವರ್ಷ ಜೈಲುಶಿಕ್ಷೆ ವಿಧಿಸುವ ಅವಕಾಶ ಇದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಎಂಟು ಮಂದಿಯ ಮೇಲೆ ಪ್ರಕರಣ ದಾಖಲಿಸಿದ್ದೇವೆ ಎಂದರು.
ಈತನ ಪತ್ನಿ ಹಾಗು ಮಗುವಿಗೆ ಯಾವುದೇ ಕೊರೋನಾ ಸೋಂಕು ಪತ್ತೆಯಾಗಿಲ್ಲ ಎಂದು ವೈದ್ಯಕೀಯ ವರದಿ ಬಂದಿದೆ ಎಂದು ಈ ಸಂದರ್ಭ ಜಿಲ್ಲಾಧಿಕಾರಿ ಹೇಳಿದರು.