ಪಂಪವೆಲ್ : ಲಾರಿ ಗುದ್ದಿ ಸರಣಿ ಅಪಘಾತ 3 ಕಾರು ಜಖಂ

ಮಂಗಳೂರು: ಲಾರಿ ಚಾಲಕನ ನಿಯಂತ್ರಣ ತಪ್ಪಿ ಎದುರಿನಲ್ಲಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮುಂದಿದ್ದ ಮೂರು ಕಾರುಗಳು ಸರಣಿ ಅಪಘಾತಗೊಳಗಾಗಿ ಜಖಂಗೊಂಡಿವೆ.
ಅಪಘಾತದಲ್ಲಿ ಹುಂಡೈ ಕ್ರೇಟಾ ಕಾರು ಹಿಂಬಾಗ ಹಾಗೂ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.


ಸರಣಿ ಅಪಘಾತದ ಪರಿಣಾಮವಾಗಿ ಮೂರು ವಾಹನಗಳ ಸವಾರರು ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸರಣಿ ಅಪಘಾತದಿಂದ ಕೆಲಕಾಲ ಸಂಚಾರ ಸ್ಥಗಿತಗೊಂಡಿದ್ದು ಕೆಲಕ್ಷಣಗಳಲ್ಲೇ ಸ್ಥಳಕ್ಕೆ ಆಗಮಿಸಿದ ಆರಕ್ಷಕರು ಸಂಚಾರಕ್ಕೆ ಅನುವುಮಾಡಿಕೊಟ್ಟರು.
ಸಧ್ಯ ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಲಾರಿ ಚಾಲಕನಿಗಾಗಿ ಪೋಲಿಸರು ಶೋಧ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!