ಕಾಪು: ಮುಳುಗಿದ ಬೋಟ್ 9 ಮೀನುಗಾರರ ರಕ್ಷಣೆ

ಉಡುಪಿ: ಮಂಗಳೂರಿನಿಂದ ಮೀನುಗಾರಿಕೆಗೆ ತೆರಳಿದ ಬೋಟೊಂದು ಕಾಪು ಸಮುದ್ರದ ಮಧ್ಯೆ ಮುಳುಗಿದ ಘಟನೆ ಇಂದು ರಾತ್ರಿ ನಡೆದಿದೆ.
ಇಂದು ಸಂಜೆ ಮಂಗಳೂರಿನ ಬಜ್ಪೆಯ ಬಶೀರ್ ಮಾಲಕತ್ವದ ಎಸ್ ಎಮ್ ಫಿಶರೀಸ್ ಬೋಟ್ ನಲ್ಲಿ 9 ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಈ ಸಂದರ್ಭ ಕಾಪು ತೀರದಿಂದ 13 ನಾಟಿಕಲ್ ದೂರ ಬೋಟ್ ತಲುಪುತಿದ್ದಂತೆ ಜೋರಾಗಿ ಬೀಸಿದ ಗಾಳಿಗೆ ಬೋಟ್ ಮಗುಚಿ ಬಿದ್ದಿದೆಂದು ಹೇಳಲಾಗುತ್ತಿದೆ.
ಈ ಸಂದರ್ಭ ಬೋಟ್ ನಲ್ಲಿದ್ದ 9 ಜನರೂ ಸಮುದ್ರದ ಪಾಲಾಗಿದ್ದರು, ಹಿಂದೆಯಿಂದ ಬರುತ್ತಿದ್ದ ಇವರ ಇನ್ನೊಂದು ಬೋಟ್‌ನಲ್ಲಿದ್ದವರನ್ನು ಮುಳುಗುತ್ತಿದ್ದ ಮೀನುಗಾರರನ್ನು ರಕ್ಷಿಸಿದರು ಎಂದು ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷಕ ಆರ್ . ಚೇತನ್ ತಿಳಿಸಿದ್ದಾರೆ. ಬೋಟ್ ಮುಳುಗಿ 20 ಲಕ್ಷಕ್ಕೂ ಹೆಚ್ಚು ನಷ್ಟವಾಗಿರು ಸಾಧ್ಯತೆ ಇದೆಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!