ಮುಳುಗುತ್ತಿದ್ದ ದೋಣಿಯ ರಕ್ಷಣೆ – ಮೀನುಗಾರರು ಅಪಾಯದಿಂದ ಪಾರು

ಭಟ್ಕಳ: ಇಲ್ಲಿನ ಅರಬ್ಬಿ ಸಮುದ್ರದಲ್ಲಿ ಶುಕ್ರವಾರ ಮುಳುಗುತ್ತಿದ್ದ ದೋಣಿಯನ್ನು ಮತ್ತೊಂದು ದೋಣಿಯ ಮೀನುಗಾರರೇ ರ‌ಕ್ಷಿಸಿದ್ದಾರೆ. ಅದರಲ್ಲಿದ್ದ ಎಲ್ಲ 28 ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ.
ಸಮುದ್ರ ದಡದಿಂದ 25 ನಾಟಿಕಲ್ ಮೈಲು (ಸುಮಾರು 46 ಕಿ.ಮೀ) ದೂರದ ಆಳ ಸಮುದ್ರದಲ್ಲಿ ಅವಘಡ ನಡೆದಿತ್ತು. ಮಧುಕರ ಪೂಜಾರಿ ಎಂಬವರ ಒಡೆತನದ ‘ಮೂಕಾಂಬಿಕಾ’ ಹೆಸರಿನ ದೋಣಿಯಲ್ಲಿ ಭಟ್ಕಳ ಬಂದರಿನಿಂದ ಮೀನುಗಾರಿಕೆಗೆ ಹೋಗಲಾಗಿತ್ತು.
ದೋಣಿಯ ತಳಭಾಗ ಒಡೆದು ಮುಳುಗುವ ಹಂತ ತಲುಪಿದ್ದನ್ನು ಸಮೀಪದಲ್ಲೇ ಇದ್ದ ಇತರ ದೋಣಿಗಳ ಮೀನುಗಾರರು ಗಮನಿಸಿದ್ದು . ಕೂಡಲೇ ರಕ್ಷಣೆಗೆ ಧಾವಿಸಿ ಕಾರ್ಯಾಚರಣೆ ಮಾಡಿದರು. ಸಂಜೆಯ ವೇಳೆಗೆ ದೋಣಿಯನ್ನು ಎಳೆದು ದಡಕ್ಕೆ ತರಲಾಯಿತು ಎಂದು ಸ್ಥಳೀಯರಾದ ಶಂಕರ ಮೊಗೇರ್ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

error: Content is protected !!