ಪ್ರೈಮ್ ಉಡುಪಿ : ಐಬಿಪಿಎಸ್ ಬ್ಯಾ೦ಕಿ೦ಗ್ ಪರೀಕ್ಷಾ ತರಬೇತಿ ಆಗಸ್ಟ್ 29 ರಿಂದ ಆರಂಭ

ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (.ಬಿ.ಪಿ.ಎಸ್) ಆಯೋಜಿಸುವ ಬ್ಯಾಂಕ್ ಆಪೀಸರ್ ಮತ್ತು ಕ್ಲರಿಕಲ್ ಹುದ್ದೆಗಳ ನೇಮಕಕ್ಕೆ ಐಬಿಪಿಎಸ್ ಸಂಸ್ಥೆಯು ಅಧಿಸೂಚನೆ ಹೊರಡಿಸಿದ್ದು, , ಈ ನೇಮಕಾತಿ ಪರೀಕ್ಷೆಗೆ ಇದೇ ಬರುವ ಆಗಸ್ಟ್ 29 ರಿಂದ ದೈನಂದಿನ ತರಬೇತಿ ತರಗತಿಗಳು ಉಡುಪಿ ಬ್ರಹ್ಮಗಿರಿಯ ಪ್ರೈಮ್ ಕೇಂದ್ರದಲ್ಲಿ ಆರಂಭಗೊಳ್ಳಲಿದೆ.

ಇದರ ಪೂರ್ವಭಾವಿಯಾಗಿ ಕಳೆದ ಬಾನುವಾರದಂದು ಬ್ಯಾಂಕಿಂಗ್ ಪರೀಕ್ಷಾ ತರಬೇತಿಯ ಬಗ್ಗೆ ವಿಶೇಷ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮ ನಡೆಸಲಾಯಿತು. ಸಂಪನ್ಮೂಲ ವ್ಯಕ್ಥಿಗಳಾಗಿ ಶ್ರೀ ಚೇತನ್ ಪ್ರಭು ಇವರು ಬ್ಯಾ೦ಕಿಂಗ್ ನೇಮಕಾತಿ ಪರೀಕ್ಷೆಯ ಹೊಸ ಪಠ್ಯಕ್ರಮಗಳಿಗಣುಗುಣವಾಗಿ ಪ್ರಿಲಿಮಿನರಿ ಪರೀಕ್ಷೆಯಲ್ಲಿ ಬರುವ ರೀಸನಿಂಗ್, ಇಂಗ್ಲೀಷ್ ಹಾಗೂ ನ್ಯೂಮರಿಕಲ್ ಎಬಿಲಿಟಿಯ 100 ಅಂಕಗಳ ಪ್ರಶ್ನೆಯನ್ನು 60 ನಿಮಿಷಗಳಲ್ಲಿ ಉತ್ತರಿಸಲು ಬೇಕಾದ ಶಾರ್ಟ್ ಕಟ್ ಮೆಥಡ್ ಮತ್ತು ಮೈನ್ಸ್ ಪರೀಕ್ಷೆಯಲ್ಲಿ ಬರುವ 5 ವಿಷಯಗಳ 190 ಪ್ರಶ್ನೆಗಳನ್ನು ಅತೀ ಕಡಿಮೆ ಅವಧಿಯಲ್ಲಿ ತ್ವರಿತವಾಗಿ ಹಾಗೂ ನಿಖರವಾಗಿ 160 ನಿಮಿಷದಲ್ಲಿ ಉತ್ತರಿಸಲು ಬೇಕಾದ ಟೈಮ್ ಮೇನೇಜ್ಮ್ಂಟ್ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ವಾರದ ಎಲ್ಲಾ ದಿನಗಳಲ್ಲಿ ನಡೆಯಲಿರುವ ಈ ತರಬೇತಿಯು ಪ್ರತೀ ಸೋಮವಾರದಿಂದ ಶನಿವಾರ ಸಾ. 5.00-6.30 ರವರೆಗೆ ಮತ್ತು ಪ್ರತೀ ಬಾನುವಾರ ಸಾ.3.30-6.30 ವರೆಗೆ 200 ಗಂಟೆಗಳ ಈ ತರಬೇತಿ ಐಬಿಪಿಎಸ್ ಬ್ಯಾಂಕಿಂಗ್ ಪ್ರಿಲಿಮಿನರಿ ಪರೀಕ್ಷೆಯ ರೀಸನಿಂಗ್, ಇಂಗ್ಲೀಷ್ ಮತ್ತು ಮ್ಯಾಥ್ಸ್, ಹಾಗೂ ಮೈನ್ಸ್ ಪರೀಕ್ಷೆಯ ರೀಸನಿಂಗ್, ಮ್ಯಾಥ್ಸ್, ಜನರಲ್ ನಾಲೇಜ್, ಇಂಗ್ಲೀಷ್ ಹಾಗೂ ಕಂಪ್ಯೂಟರ್ ಮುಂತಾದ ವಿಷಯಗಳಿಗೆ ಸಂಬಂದಿಸಿದಂತೆ ತರಗತಿಗಳು ನಡೆಯಲಿದ್ದು ಡಿಸಂಬರ್ ತಿಂಗಳಿನಲ್ಲಿ ಅಂತ್ಯಗೊಳ್ಳಲಿದೆ, ತದನಂತರ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಉಚಿತ ಸಂದರ್ಶನ ಹಾಗೂ 1 ವರ್ಷ ಅವಧಿಯ ಆನ್ ಲೈನ್ ಮೊಕ್ ಟೆಸ್ಟ್ ಪ್ರೈಮ್ ಕಂಪ್ಯೂಟರ್ ಲ್ಯಾಬ್ ನಲ್ಲಿ ಉಚಿತವಾಗಿ ದೊರೆಯಲಿದೆ.

ಪದವೀದರರು, ಸ್ನಾತಕೋತ್ತರ ಪದವೀದರರು ಹಾಗೂ ಅಂತಿಮ ಹಂತದ ಪದವಿ ಪೂರೈಸುತ್ತಿರುವ ವಿದ್ಯಾರ್ಥಿಗಳು ಈ ತರಬೇತಿಯಲ್ಲಿ ಬಾಗವಹಿಸಿ ಮುಂದೆ ಬರಲಿರುವ ಬ್ಯಾಂಕಿಂಗ್, ರೈಲ್ವೆ, ಇನ್ಸೂರೆನ್ಸ್, ಪೋಸ್ಟಲ್, ಮೆಸ್ಕಾಂ ಹಾಗೂ ಇನ್ನಿತರ ಯಾವುದೇ ಆಪ್ಟಿಟ್ಯೂಡ್ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬಹುದಾಗಿದೆ.  

ಐಬಿಪಿಎಸ್ ಪಿ.ಓ. ಹುದ್ದೆಗೆ 20 ರಿಂದ 30 ವರ್ಷ ತುಂಬಿದ ಯಾವುದೇ ಪದವಿ ಪೂರೈಸಿದ ಅಭ್ಯರ್ಥಿಗಳು ತಾ. 28-08-2019 ರ ಒಳಗೆ www.ibps.in ನಲ್ಲಿ, ಆನ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದೇ ಬರುವ ಆಗಸ್ಟ್ 29 ರಿಂದ ಆರಂಭಗೊಳ್ಳಲಿರುವ ಬ್ಯಾಂಕಿಂಗ್ ನೇಮಕಾತಿ ಪರೀಕ್ಷಾ ತರಬೇತಿಯ ಡೈಲಿ ಇವ್ನಿಂಗ್ ಬ್ಯಾಚ್ ಗೆ ಸೇರಬಯಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಪ್ರೈಮ್, ಗ್ರೇಸ್ ಮೇನರ್ ಬಿಲ್ದಿಂಗ್, ಲಯನ್ಸ್ ಭವನದ ಹತ್ತಿರ, ಬ್ರಹ್ಮಗಿರಿ ಕೇಂದ್ರ, ಉಡುಪಿ PH – 0820-4293422 ಇಲ್ಲಿ ಸಂಪರ್ಕಿಸಬಹುದು ಎಂದು ಸಂಸ್ಥೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!