ಪ್ಲಾಸ್ಟಿಕ್ ಮುಕ್ತ ಶಿರ್ವ ಗ್ರಾಮ ಪಂಚಾಯತ್ ಗೆ ಗ್ರಾಮಸ್ಥರ ಮುನ್ನುಡಿ

ಉಡುಪಿ:ಪ್ಲಾಸ್ಟಿಕ್ ಬಳಕೆಯು ಅತಿಯಾದ ದುಷ್ಪರಿಣಾಮವನ್ನು ಬೀರುತ್ತಿದ್ದರೂ, ಸರಕಾರ ಪ್ಲಾಸ್ಟಿಕ್ ನಿಷೇಧವನ್ನು ಜಾರಿ ಮಾಡಿದ್ದರೂ, ಜನರು ಇನ್ನೂ ಕೂಡ ಇದನ್ನು ಬಳಸುತ್ತಿದ್ದು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಮ್ಮ ವಾರ್ಡಿನ ಮತದಾರರು ದೃಢ ಸಂಕಲ್ಪವನ್ನು ಮಾಡಬೇಕು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಚಿಂತನೆಗೆ ಬಂಟಕಲ್ಲು ವಾರ್ಡಿನ ಗ್ರಾಮಸ್ಥರು ಮುನ್ನುಡಿ ಬರೆಯಬೇಕೆಂದು ಶಿರ್ವ ಗ್ರಾಮ ಪಂಚಾಯತ್ ಸದಸ್ಯರಾದ ಕೆ.ಆರ್ ಪಾಟ್ಕರ್ ತಿಳಿಸಿದರು.
ಬಂಟಕಲ್ಲು ದೇವಸ್ಥಾನದಲ್ಲಿ ನಡೆದ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಟಕಲ್ಲು ವಾರ್ಡ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಪ್ಲಾಸ್ಟಿಕ್ ಬಳಕೆಯನ್ನು ನಾವೇ ಸ್ವಯಂ ಪ್ರೇರಿತವಾಗಿ ನಿಲ್ಲಿಸಿದಾಗ, ರಸ್ತೆ ಬದಿಗಳಲ್ಲಿ ಕಾಣುವ ಕಸ ತ್ಯಾಜ್ಯ ಪ್ಲಾಸ್ಟಿಕ್ ಗೆ ಮುಕ್ತಿಯನ್ನು ನೀಡಬಹುದು. ಅದಕ್ಕಾಗಿಯೇ ಇಂದು ವಾರಂಟ್ ಸಭೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಉಚಿತ ಬಟ್ಟೆ ಚೀಲವನ್ನು ವಿತರಿಸಲಾಗಿದೆ ಎಂದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕರವರು ವಾರ್ಡ್ ಸಭೆಯ ಮಹತ್ವ ಪಂಚಾಯತ್ನಿಂದ ಸಿಗುವ ಸೌಲಭ್ಯಗಳು ವಿವಿಧ ಯೋಜನೆಗಳ ಸವಿಸ್ತಾರ ಮಾಹಿತಿ ನೀಡಿದರು. ಶಿರ್ವ ಪೊಲೀಸ್ ಠಾಣಾ ಎಎಸ್ಐ ಸುರೇಶ್ ರವರು, ತಿದ್ದುಪಡಿಯಾಗಿರುವ ಮೋಟಾರು ವಾಹನ ಕಾಯಿದೆ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.
ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ ಸಂತೋಷ್ ಕುಮಾರ್ ಬೈಲೂರು ರವರು, ಆರೋಗ್ಯ ಮಾಹಿತಿ ನೀಡಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದೊರೆಯುವ ವಿವಿಧ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.

ಬಂಟಕಲ್ಲಿನಲ್ಲಿ ಸಾರ್ವಜನಿಕ  ಶೌಚಾಲಯ ರಚನೆ ಬಂಟಕಲ್ಲು ಅಂಗನವಾಡಿ ಕೇಂದ್ರಕ್ಕೆ ಹೊಸ ಆರ್.ಸಿ.ಸಿ. ಕಟ್ಟಡಕ್ಕೆ ಪ್ರಸ್ತಾವನೆ ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ವೈದ್ಯರ ಹುದ್ದೆ ಭರ್ತಿಗೆ ಕ್ರಮ ಶಿರ್ವದಲ್ಲಿ ಅಗ್ನಿಶಾಮಕ ದಳ ಶಾಖೆ ಸ್ಥಾಪನೆ ಬಂಟಕಲ್ಲಿನಲ್ಲಿ ಆರೋಗ್ಯ ಉಪಕೇಂದ್ರ ಸ್ಥಾಪನೆ , ಬಂಟ ಕಲ್ಲಿನಲ್ಲಿ ಸಂಜೆ ಬೆಳಿಗ್ಗೆ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಕಾಪು ಬಂಟಕಲ್ಲು ಮಾರ್ಗವಾಗಿ ಬಸ್ಸು ಸಂಚಾರ ವ್ಯವಸ್ಥೆ ಆಧಾರ್ ತಿದ್ದುಪಡಿ ವ್ಯವಸ್ಥೆಯನ್ನು ಮತ್ತೆ ಪಂಚಾಯಿತಿಗೆ ನೀಡುವುದು ಬರಲು ಬಾಕಿ ಇರುವ ಪಡಿತರ ಚೀಟಿಗಳನ್ನು ಬೇಗನೆ ದೊರೆಯುವಂತೆ ಆಹಾರ ಇಲಾಖೆಗೆ ಬರೆಯೋದು ಮುಂತಾದ ಪ್ರಾಮುಖ್ಯ ಬೇಡಿಕೆಗಳನ್ನು ಗ್ರಾಮಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳುವಂತೆ ವಾರ್ಡಿನ ಮತದಾರರು ಆಗ್ರಹಿಸಿದರು.

ಬಂಟಕಲ್ಲು ವಾರ್ಡ್ ನಲ್ಲಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಲಾಯಿತು. 14 ನೇ ಹಣಕಾಸಿನ ಬಂಟಕಲ್ಲು ವಾರ್ಡಿಗೆ ನೀಡಲಾದ ಕಾಮಗಾರಿಗಳ ಬಗ್ಗೆ ತಿಳಿಸಲಾಯಿತು. ರಸ್ತೆ ಬೀದಿ ದೀಪ ಕುಡಿಯುವ ನೀರಿನ ಸೌಲಭ್ಯಗಳು ಸೇರಿದಂತೆ ಇತರ ಅಭಿವೃದ್ಧಿ ಕಾಮಗಾರಿಗಳು ಬೇಡಿಕೆಯನ್ನು ಗ್ರಾಮಸ್ಥರು ಸಲ್ಲಿಸಿದರು.

ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ವಾರಿಜಾ ಪೂಜಾರ್ತಿ,  ತಾಲ್ಲೂಕು ಪಂಚಾಯತ್ ಸದಸ್ಯೆ ಗೀತಾ ವಾಗ್ಲೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬಂಟಕಲ್ಲು ವಾರ್ಡಿನ ಸದಸ್ಯರಾದ ವಾಯ್ಲೆಟ್ ಕಾಸ್ತೆಲಿನೋ, ಗ್ರೇಸಿ ಕಾರ್ಡೊಜ, ಸುಜಾತಾ ಕುಲಾಲ್ ವೇದಿಕೆಯಲ್ಲಿ ಇದ್ದರು.

ಭಾರಿ ಮಳೆಯ ನಡುವೆಯೂ ಬಂಟಕಲ್ಲು ವಾರ್ಡ್ನ ಮತದಾರರು ವಾರ್ಡ್ ಸಭೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದು ವಿಶೇಷವಾಗಿತ್ತು .   ಗ್ರಾಮ ಪಂಚಾಯಿತಿ ಸದಸ್ಯೆ ವಾಯ್ಲೆಟ್ ಕಾಸ್ತೆಲಿನೋ ಸ್ವಾಗತಿಸಿದರೆ, ಪಂಚಾಯತ್ ಕಾರ್ಯದರ್ಶಿ ಮಂಗಳ ಕ್ರಿಯಾ ಯೋಜನೆಗೆ ಕಾಮಗಾರಿಗಳ ಮಾಹಿತಿ ನೀಡಿದರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವಾರ್ಡ್ ಸಭೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಉಚಿತ ಬಟ್ಟೆ ಚೀಲವನ್ನು ವಿತರಿಸಲಾಯಿತು.

ಗ್ರಾಮಾಡಳಿತ ವ್ಯವಸ್ಥೆಯನ್ನು ಅಧ್ಯಯನ ಮಾಡುವ ಉದ್ದೇಶದಿಂದ ಶಿರ್ವ MSRS ಕಾಲೇಜಿನ ಉಪನ್ಯಾಸಕ ಸುರೇಶ್ ಅವರ ನೇತೃತ್ವದಲ್ಲಿ 15 ವಿದ್ಯಾರ್ಥಿಗಳು ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಟಕಲ್ಲು ವಾರ್ಡಿನ ವಾರ್ಡ್ ಸಭೆಯಲ್ಲಿ ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!