ಮುಂದೂಡಿದ ವಿಶ್ವಾಸ ಮತಯಾಚನೆ – ಬಿಜೆಪಿ ಧರಣಿ
ಆಡಳಿತ ಪಕ್ಷ ಇಂದು ಕೋರಬೇಕಾಗಿದ್ದ ವಿಶ್ವಾಸ ಮತದ ಪ್ರಕ್ರಿಯೆ ನಾಳೆಗೆ ಮುಂದೂಡಲ್ಪಟ್ಟದ್ದನ್ನು ವಿರೋಧಿಸಿ ಸದನದ ಮೊಗಸಾಲೆಯಲ್ಲಿ ಬಿಜೆಪಿ ಪಕ್ಷ ಅಹೋರಾತ್ರಿ ಧರಣಿಯನ್ನ ನಡೆಸುತ್ತಿದ್ದೆ
ಮುಖ್ಯಮಂತ್ರಿ ಇಂದು ವಿಶ್ವಾಸ ಮತ ಯಾಚನೆ ಮಾಡುತ್ತಾರೆ ಎಂದು ನಂಬಿದ ಬಿಜೆಪಿ ಪಕ್ಷದವರಿಗೆ ಇಂದಿನ ಸದನದ ಕಲಾಪ ಕಹಿಯನ್ನ ನೀಡಿದೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರವರು ಹಾಕಿದ ಪಾಯಿಂಟ್ ಆಫ್ ಆರ್ಡರ್ ಸಂಜೆವರೆಗೂ ವಿಶ್ವಾಸ ಮತ ಒಂದನ್ನು ಹೊರತು ಪಡಿಸಿ ಮತ್ತು ಉಳಿದ ಎಲ್ಲ ಹೈ ಡ್ರಾಮಾ ಕೂಡ ನಡೆಯುವಂತಾಯಿತು . ಇದರಿಂದ ಬೇಸತ್ತ ಬಿಜೆಪಿ ರಾಜ್ಯ ಪಾಲರಿಗೆ ಮನವಿಯನ್ನ ಮಾಡಿ , ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಇಂದೇ ವಿಶ್ವಾಸ ಮತ ಯಾಚಿಸಬೇಕು ಎಂಬ ಸಂದೇಶವನ್ನ ನೀಡಿದರು ಸಹ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ನಾಳೆಗೆ ಮುಂದೂಡಲ್ಪಟ್ಟಿತು ಇದರಿಂದ ಕಸಿವಿಸಿಗೊಂಡ ವಿರೋಧಪಕ್ಷವಾದ ಬಿಜೆಪಿಯು ಸದನದ ಮೊಗಸಾಲೆಯಲ್ಲಿ ಅಹೋರಾತ್ರಿ ಧರಣಿಯನ್ನ ನಡೆಸುತ್ತಿದ್ದೆ.. ಯಡಿಯೂರಪ್ಪ ಸೇರಿದಂತೆ ಹಾಗು ಎಲ್ಲ ಶಾಸಕರು ರಾತ್ರಿಯ ಭೋಜನವನ್ನ ಸ್ಥಳದಲ್ಲಿಯೇ ಮಾಡುತ್ತಿದ್ದಾರೆ , .ನಾಳೆ ಮಧ್ಯಾಹ್ನ 1 ಗಂಟೆಯೊಳಗೆ ವಿಶ್ವಾಸ ಮತ ಯಾಚಿಸಬೇಕೆಂದು ರಾಜ್ಯ ಪಾಲರು ಗಡುವುನೀಡಿದ್ದು ನಾಳೆ ಇನ್ನು ಯಾವ ಹೊಸ ತಿರುವು ಪಡೆಯುತ್ತದೋ ಕಾದು ನೋಡಬೇಕು …