ಮದ್ಯ ಪ್ರಿಯರಿಗೆ ಮತ್ತೆ ನಿರಾಸೆ; ಮದ್ಯದಂಗಡಿ ತೆರೆಯಲು ಅನುಮತಿ ಮುಂದೂಡಿಕೆ
ಉಡುಪಿ (ಉಡುಪಿ ಟೈಮ್ಸ್ ವರದಿ ) – ಮದ್ಯಪ್ರಿಯರಿಗೆ ಮತ್ತೆ ನಿರಾಸೆ ಸುದ್ದಿ ಬಂದಿದೆ , ಮದ್ಯದಂಗಡಿ ತೆರಯಲು ಅನುಮತಿಯನ್ನ ಏಪ್ರಿಲ್ 20 ಕ್ಕೆ ಮುಂದೂಡಲಾಗಿದೆ.
ಲಾಕ್ ಡೌನ್ ನಿಂದ ಎಲ್ಲರಿಗೂ ಕಷ್ಟ ವಾಗುತ್ತಿದ್ದೆ ಆದರೆ ಮದ್ಯ ಪ್ರಿಯರಿಗಂತೂ ತುಂಬಾ ಸಂಕಟ ಉಂಟಾಗಿದೆ .
ಏಪ್ರಿಲ್ 15 ರಿಂದ ಮದ್ಯದಂಗಡಿ ತೆರೆಯುವ ಆಶಯದಲಿದ್ದವರಿಗೆ ಇದೀಗ ಕೇಂದ್ರ ನಿರಾಸೆ ಮೂಡಿಸಿದೆ. ಈಗಾಗಲೇ ಉಡುಪಿಯಲ್ಲಿ ಬಾರ್ ಕಳ್ಳತನವು ಪೊಲೀಸರಿಗೆ ತಲೆನೋವಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪರವರು ಮದ್ಯದಂಗಡಿ ತೆರೆಯುವ ಬಗ್ಗೆ ಚರ್ಚೆ ಮಾಡಿದ್ದು ಆದರೆ ಕೇಂದ್ರದ ಸೂಚನೆ ಮೇರೆಗೆ ಇದೀಗ ಏಪ್ರಿಲ್ 20 ರವರೆಗೆ ಮದ್ಯದಂಗಡಿ ತೆರೆಯುವ ಅನುಮತಿಯನ್ನ ಮುಂದೂಡಲಾಗಿದೆ.
ಇಷ್ಟು ದಿನ ಕಾದಿದ್ದೀರಿ, ಇನ್ನು ಸ್ವಲ್ಪ ದಿನ ಕಾಯಿರಿ – ರಾಜ್ಯದಲ್ಲಿ ಲಾಕ್ ಡೌನ್ ನಡುವೆ ಮದ್ಯ ಮಾರಾಟ ಮಾಡಬೇಕಾ, ಬೇಡವಾ ಎನ್ನವ ಗೊಂದಲ ರಾಜ್ಯ ಸರ್ಕಾರಕ್ಕೆ ಎದುರಾಗಿದೆ. ಇನ್ನೊಂದೆಡೆ ಮದ್ಯದಂಗಡಿಗಳು ಓಪನ್ ಆಗುತ್ತವೆ ಎಂದು ಕಾತುರದಿಂದ ಕಾಯುತ್ತಿದ್ದ ಮದ್ಯಪ್ರಿಯರು ಚಿಂತೆಗೀಡಾಗಿದ್ದಾರೆ. ಇದೆಲ್ಲದರ ಮಧ್ಯೆ ಇದೀಗ ಅಬಕಾರಿ ಸಚಿವ ಎಚ್.ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.
ಬೆಳಗ್ಗೆ, ಸಂಜೆ ವೇಳೆಗೆ ಮದ್ಯ ಮಾರಾಟ ಮಾಡುವ ಸಿದ್ಧತೆ ನಡೆದಿತ್ತು. ಆದರೆ ಮದ್ಯಾಹ್ನದ ಹೊತ್ತಿಗೆ ಅಬಕಾರಿ ಸಚಿವ ನಾಗೇಶ್ ಮಾತು ಬದಲಿಸಿದ್ದಾರೆ. ಬೆಳಗ್ಗೆ ಅಂಬೇಡ್ಕರ್ ಜಯಂತಿ ವೇಳೆ ಸಂಜೆ ವೇಳೆ ಮದ್ಯದಂಗಡಿಗಳನ್ನು ತೆರಯಲಾಗುವುದು ಎಂದಿದ್ದ ನಾಗೇಶ್, ಮಧ್ಯಾಹ್ನವಾಗುತ್ತಿದ್ದಂತೆ ಪ್ರಧಾನಿ ಮೋದಿ ಭಾಷಣದ ನಂತರ ತಮ್ಮ ವರಸೆ ಬದಲು ಮಾಡಿದ್ದಾರೆ.
ಇದೀಗ ಏಪ್ರಿಲ್ 20ರ ವರೆಗೆ ವಿಸ್ತರಿಸುವ ಚಿಂತನೆ ನಡೆಸಿದ್ದಾರೆ. ಈ ಕುರಿತು ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನಾಗೇಶ್, ಮದ್ಯದಂಗಡಿ ತೆರೆದರೆ ಜನಸಂದಣಿ ಹೆಚ್ಚಾಗುತ್ತದೆ. ಏಪ್ರಿಲ್ 20ರ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು. ಪ್ರಧಾನಿ ಮೋದಿ ಲಾಕ್‍ಡೌನ್‍ನ್ನು ಕಟ್ಟುನಿಟ್ಟಾಗಿ ಮುಂದುವರೆಸಿ ಎಂದಿದ್ದಾರೆ. ಹೀಗಾಗಿ ಸರ್ಕಾರವನ್ನು ಒತ್ತಾಯ ಮಾಡಲು ಅಗುವುದಿಲ್ಲ. ಇಷ್ಟು ದಿನ ಕಾದಿದ್ದೀರಿ, ಇನ್ನು ಸ್ವಲ್ಪ ದಿನ ಕಾಯಿರಿ ಎಂದು ಸಲೀಸಾಗಿ ಮದ್ಯ ಪ್ರಿಯರಿಗೆ ಶಾಕ್ ನೀಡಿದ್ದಾರೆ. ಅಲ್ಲದೆ ಇನ್ನು ಸ್ವಲ್ಪ ದಿನ ಕಾಯಿರಿ ಎಣ್ಣೆಗಿಂತ ಜನರ ಪ್ರಾಣ ಮುಖ್ಯವಾಗಿದೆ ಎಂದಿದ್ದಾರೆ.