ಹೊಸಬೆಳಕು ಆಶ್ರಮದಲ್ಲಿ ಪೊರ್ಲುದ ಆಟಿ

ಮಣಿಪಾಲ:  ಆಟಿದ ಹಬ್ಬ ಅಂದ ಕೂಡಲೇ ಒಂದು ದೊಡ್ಡ ಕಾರ್ಯಕ್ರಮ ಮಾಡಬೇಕು ಆ ಕಾರ್ಯಕ್ರಮಕ್ಕೆ ಗಣ್ಯವ್ಯಕ್ತಿಗಳು ಬರಬೇಕು ಅನ್ನೋ ಯೋಚನೆ ಇರುವುದು ಸಹಜ ಆದರೆ ಮಣಿಪಾಲದ ಸರಳೆಬೆಟ್ಟಿನಲ್ಲಿ ಇರುವ ಹೊಸಬೆಳಕು ಆಶ್ರಮದಲ್ಲಿ ಪೊರ್ಲುದ ಆಟಿ  ವಿಭಿನ್ನವಾಗಿ ಆಚರಣೆ ಮಾಡಲಾಯಿತು.
ಕುಂದಾಪುರದ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿ ಆಟಿಯ ಹಳೆಯ ನೆನಪನ್ನು ಬಿಡಿ ಬಿಡಿಯಾಗಿ ವಿವರಿಸಿದರು.
40ಬಗೆಯ ತಿಂಡಿ ತಿನಿಸುಗಳನ್ನು ಬಂದಂತಹ ಅತಿಥಿಗಳೇ ಮನೆಯಲ್ಲಿ ತಯಾರಿ ಮಾಡಿ, ಆಶ್ರಮದ ನಿವಾಸಿಗಳಿಗೆ ಊಟ ಬಡಿಸಿದ್ದಾರೆ. ಕಾರ್ಯಕ್ರಮದ ಸಂಯೋಜಕಿಯಾದ ಶ್ರೀಮತಿ ಜ್ಯೋತಿ ರಮನಾಥ್ ಶೆಟ್ಟಿ, ಶ್ರೀಮತಿ ಅಕ್ಷತಾ ಗಿರೀಶ್, ಆಶ್ರಮದ ಸಂಸ್ಥಾಪಕಿಯಾದ ಶ್ರೀಮತಿ ತನುಲಾ ತರುಣ್, ಶ್ರೀಮತಿ ಶೆರ್ಲಿ ಮನೋಜ್, ಅಶೋಕ್ ತೆಕ್ಕಟ್ಟೆ ಉಪಸ್ಥಿತರಿದ್ದರು.
ಶಶಿಕಾಂತ್ ಶೆಟ್ಟಿ ಸ್ವಾಗತಿಸಿದರು.  ಸುಜಯಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!