ಕಾರ್ಕಳದಲ್ಲಿ ಪೋಲೀಸರ ಬಸ್ಕಿ ಶಿಕ್ಷೆ

ಕಾರ್ಕಳ: (ಉಡುಪಿ ಟೈಮ್ಸ್ ವರದಿ)- ಕೊರೋನಾ ಹಿನ್ನಲೆ ಜಿಲ್ಲೆಯಾದ್ಯಂತ ಲಾಕ್ ಡೌನ್ ಇದ್ದರು ಕೆಲವರು ಇನ್ನು ಕೂಡ ಅನಾವಶ್ಯವಾಗಿ ರೋಡ್ ನಲ್ಲಿ ತಿರುಗಾಡುವುದನ್ನು ನಿಲ್ಲಿಸಿಲ್ಲ. ಇಂತವರಿಗಾಗಿ ಕಾರ್ಕಳ ಪೊಲೀಸ್ರು ಪ್ರಧಾನಿ ಮಂತ್ರಿಗಳ ಫಿಟ್ ಇಂಡಿಯಾ ಅಭಿಯಾನ ಜಾರಿಗೊಳಿಸಿದ್ದಾರೆ.‌ ಅನಾವಶ್ಯವಾಗಿ ಬೀದಿಗೆ ಬರುವವರನ್ನು ನಿಲ್ಲಿಸಿ ಅವರಿಂದ 5 ಬಸ್ಕಿ ತೆಗೆಯುವಂತೆ ಪೊಲೀಸ್ ರು ಹೇಳುತ್ತಿದ್ದಾರೆ. ಲಾಠಿ ಬೀಸಿದರು ಭಯ ಪಡದವರು‌ ಸದ್ಯ ಕಾರ್ಕಳ ಪೊಲೀಸ್ ರ ಈ ಬಸ್ಕಿ ಅಸ್ತ್ರಕ್ಕೆ ಶರಣಾಗಿದ್ದಾರೆ.

ಜನರಲ್ಲಿ ಬೇಸರ ಮೂಡಿಸಿದ ಪೊಲೀಸ್ ನೀತಿ
ಸರಕಾರ ದಿನನಿತ್ಯ ಬಳಕೆಯ ವಸ್ತುಗಳನ್ನು ತರಲು ಅನುಮತಿ ನೀಡಿದೆ, ಆದರೆ ಪೊಲೀಸ್ ಇಲಾಖೆಯು ಮನೆಯಿಂದ ಹೊರಗಡೆ ಬಂದವರಿಗೆ ಲಾಠಿ ರುಚಿ ತೋರಿಸುವುದು , ಅಲ್ಲದೆ ಬಸ್ಕಿ ಹೊಡೆಸುವುದು, ಕಸ ಗುಡಿಸುವಂತೆ ಹೇಳುವುದು ಹೀಗೆ ತರಹ ತರಹ ಶಿಕ್ಷೆಗಳನ್ನು ನೀಡುತ್ತಿದ್ದಾರೆ, ಆದರೆ ಅದನ್ನ ಪೊಲೀಸ್ ಹಾಗು ಪಕ್ಕದ್ದಲ್ಲಿ ಇರುವವರು ವಿಡಿಯೋ ಮಾಡಿ ಅದನ್ನೇ ವೈರಲ್ ಮಾಡುತ್ತಿರುವುದು ಸಾರ್ವಜನಿಕರಿಗೆ ಬೇಸರ ಮೂಡಿಸಿದೆ . ತಮ್ಮ ದಿನದ ಅವಶ್ಯಕೆತೆಗೆ ಹೊರ ಬರುವ ಜನರನ್ನು ಏನೆಂದು ವಿಚಾರಿಸದೆ ಹಿಗ್ಗಾ ಮುಗ್ಗ ಥಳಿಸುತ್ತಿರುವುದು ಸಾರ್ವಜನಿಕರಿಗೆ ಬೇಸರ ತಂದಿದೆ. ಈಗಾಗಲೇ ಆರ್ಥಿಕ ಸಂಕಷ್ಟ , ಕೊರೋನಾ ಭೀತಿಯಿಂದ ತತ್ತರಿಸಿದ ಜನತೆಗೆ ಪೊಲೀಸರ ಈ ನಡುವಳಿಕೆ ಗಾಯದ ಮೇಲೆ ಬರೆ ಎಳೆದಂತಿದೆ.

2 thoughts on “ಕಾರ್ಕಳದಲ್ಲಿ ಪೋಲೀಸರ ಬಸ್ಕಿ ಶಿಕ್ಷೆ

  1. ನಾಗರಿಕರಿಗೆ ತೊಂದರೆಯೆನು ಇಲ್ಲ ಪೋಲಿಸ್ ಅವರ ಕರ್ತವ್ಯ ಮಾಡಿದ್ದಾರೆ ಜೀವ ಉಳಿದರೆ ಲಾಕ್ ಡೌನ್ ನಂತರ ಎಷ್ಟು ಕೂಡ ತಿರುಗಾಡಬಹುದು….
    ಪೇದೆ ಉದಯಣ್ಣನಿಗೆ ಕಾರ್ಕಳ ನಾಗರಿಕರಿಂದ ಬಾರಿ ಮೆಚ್ಚುಗೆಯ ಪ್ರಶಂಸೆ ವ್ಯಕ್ತಪಡಿಸಿದ್ದಾರೆ

  2. ಹೇಳಿದ್ದು ಕೇಳದಿದ್ದಕ್ಕೆ ಈ ಶಿಕ್ಷೆ ತುಂಬಾ ಕಮ್ಮಿ.. ಇದೇ ಪೊಲೀಸ್ ಪೇದೆ ಬೆಳ್ಮಣ್ಣು ಜನರು ಹೇಳಿದ್ದು ಕೇಳುತ್ತಿಲ್ಲಾ, ಅವರ ಜೀವಕ್ಕೆ ಅವರೇ ಅಪಾಯ ತಂದುಕೊಳ್ಳುತ್ತಿದ್ದಾರೆ ಎಂದು ಕಣ್ಣೀರು ಸುರಿಸಿದ್ದು ನಿಮಗೆ ಕಾಣಲಿಲ್ಲವೋ ಏನೋ!!??
    ಸಾವ , ದಾನ, ದಂಡ, ಭೇದ ನಮ್ಮ ಕಾರ್ಕಳ ಪೊಲೀಸರ ನೀತಿ..
    ನಮ್ಮ ಕಾರ್ಕಳ ಜನರ ಒಳಿತಿಗಾಗಿ ಹಗಳಿರುಳೆನ್ನದೇ ದುಡಿಯುತ್ತಿರುವ ಪೊಲೀಸ್ ಇಲಾಖೆಗೆ ನನ್ನದೊಂದು ಸಲಾಂ..

Leave a Reply

Your email address will not be published. Required fields are marked *

error: Content is protected !!