ರಾಹುಲ್ ಗಾಂಧಿಯನ್ನು ‘ಟ್ಯೂಬ್ ಲೈಟ್’ ಎಂದು ಕರೆದ ಪ್ರಧಾನಿ ಮೋದಿ

ನವದೆಹಲಿ: ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಟ್ಯೂಬ್ ಲೈಟ್ ಎಂದು ಅಪಹಾಸ್ಯ ಮಾಡಿದ ಸನ್ನಿವೇಶ ನಡೆಯಿತು.


ಇತ್ತೀಚೆಗೆ ದೆಹಲಿಯಲ್ಲಿ ಚುನಾವಣಾ ಪ್ರಚಾರ ರ್ಯಾಲಿ ವೇಳೆ ರಾಹುಲ್ ಗಾಂಧಿ ಮಾತನಾಡುತ್ತಾ, ದೇಶದ ಯುವಜನತೆ ಇನ್ನು ಆರು ತಿಂಗಳಲ್ಲಿ ಪ್ರಧಾನಿ ಮೋದಿಗೆ ಕೋಲಿನಲ್ಲಿ ಹೊಡೆಯುತ್ತಾರೆ ಎಂದು ಹೇಳಿದ್ದರು ಎಂದು ಮೋದಿ ಹೇಳಿದಾಗ ಮಧ್ಯೆ ಎದ್ದು ನಿಂತು ರಾಹುಲ್ ಗಾಂಧಿ ಮಾತನಾಡಲು ಮುಂದಾದರು. 


ಆಗ ಮೋದಿಯವರು ತಡೆದು ನಾನು ಕಳೆದ 30-40 ನಿಮಿಷಗಳಿಂದ ಮಾತನಾಡುತ್ತಲೇ ಇದ್ದೇನೆ, ಆದರೆ ಕರೆಂಟ್ ಪಾಸಾಗಿ ಅದು ತಲುಪಲು ಇಷ್ಟು ಹೊತ್ತು ಹಿಡಿಯಿತು, ಬಹುತೇಕ ಟ್ಯೂಬ್ ಲೈಟ್ ಗಳು ಹೀಗೆಯೇ ಎಂದರು.


ಇದಕ್ಕೂ ಮುನ್ನ ರಾಹುಲ್ ಗಾಂಧಿ ಭಾಷಣಕ್ಕೆ ಉತ್ತರಿಸಿದ ಮೋದಿ, ಕಳೆದ 70 ವರ್ಷಗಳಲ್ಲಿ ಯಾವುದೇ ಕಾಂಗ್ರೆಸ್ ನಾಯಕರು ಸ್ವಾವಲಂಬಿಗಳಾಗಲಿಲ್ಲ. ಒಬ್ಬ ನಾಯಕರ ಚುನಾವಣಾ ಆಶೋತ್ತರ ಭಾಷಣದಲ್ಲಿ ಹೇಳಿದ್ದನ್ನು ನಾನು ಕೇಳಿದೆ. ಇನ್ನು ಆರು ತಿಂಗಳಲ್ಲಿ ಮೋದಿಗೆ ಕೋಲಿನಿಂದ ಹೊಡೆಯುತ್ತೇವೆ ಎಂದು ಹೇಳಿದ್ದಾರೆ. ಕೋಲಿನಿಂದ ಹೊಡೆಸಿಕೊಳ್ಳುವುದು ಕಷ್ಟದ ನಿರೀಕ್ಷೆ ಎಂದು ಮೋದಿಯವರು ಹೇಳಿದಾಗ ಸದನ ನಗೆಗಡಲಲ್ಲಿ ತೇಲಿತು.


ಆದರೆ ಈ ಆರು ತಿಂಗಳಲ್ಲಿ ನಾನು ಸೂರ್ಯ ನಮಸ್ಕಾರಗಳನ್ನು ಮಾಡಿ ಸಿದ್ದನಾಗುತ್ತೇನೆ, ನನ್ನ ಮೇಲೆ ಬಳಕೆಯಾಗುವ ನಿಂದನೆ, ಆರೋಪಗಳಿಂದ ನನ್ನನ್ನು ನಾನು ನಿಂದನೆ ನಿರೋಧಕ, ದಂಡ ನಿರೋಧಕ ಮಾಡಿಕೊಳ್ಳುತ್ತೇನೆ ಎಂದಾಗ ಸದಸ್ಯರು ಮತ್ತಷ್ಟು ನಗೆಗಡಲಲ್ಲಿ ತೇಲಿಹೋದರು.

Leave a Reply

Your email address will not be published. Required fields are marked *

error: Content is protected !!