ಕಡೆಕಾರು ಪಂಚಾಯತ್: ಪ್ಲಾಸ್ಟಿಕ್ ಕೈಚೀಲ ನಿಷೇಧ
ಉಡುಪಿ : ಕಡೆಕಾರು ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಇಂದಿನಿಂದ ಪ್ಲಾಸ್ಟಿಕ್ ಕೈಚೀಲಕ್ಕೆ ನಿಷೇಧ ಮಾಡಿ ಎಲ್ಲರಿಗೂ ಮಾದರಿಯಾಗಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಘುನಾಥ್ ಕೋಟ್ಯಾನ್ ನೇತ್ರತ್ವದಲ್ಲಿ ಪಂಚಾಯತ್ ಸಿಬ್ಬಂದಿ, ಗ್ರಾಮ ಪಂಚಾಯತ್ ಸದಸ್ಯರು ಮತ್ತು ಚೈತನ್ಯ ಸೋಶಿಯಲ್ ವೆಲ್ಫೇರ್ ಫೌಂಡೇಶನ್ ನ ಸದಸ್ಯರು ಗ್ರಾಮದ ಅಂಗಡಿಗಳಿಗೆ ಭೇಟಿ ನೀಡಿ ಈ ಬಗ್ಗೆ ಮಾಹಿತಿ ನೀಡಿದರು.
ಗ್ರಾಹಕರಿಗೆ ನಿಷೇಧಿತ ಪ್ಲಾಸ್ಟಿಕ್ ಕೈಚೀಲ ನೀಡದಂತೆ ಅಂಗಡಿ, ವಹಿವಾಟುಗಳಿಗೆ ಪಂಚಾಯತ್ ವತಿಯಿಂದ ನೋಟೀಸು ನೀಡಲಾಯಿತು. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಕಡೆಕಾರು ಗ್ರಾಮ ಪಂಚಾಯತು ಮತ್ತು ಚೈತನ್ಯ ಸೋಶಿಯಲ್ ವೆಲ್ಫೇರ್ ಫೌಂಡೇಶನ್ ವತಿಯಿಂದ ಉಚಿತ ಬಟ್ಟೆ ಚೀಲ ಅಂಗಡಿ ಗಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತು ಉಪಾಧ್ಯಕ್ಷೆ ಮಾಲತಿ ವಿಶ್ವನಾಥ್, ತಾಲೂಕು ಪಂಚಾಯತ್ ಸದಸ್ಯೆ ಶಿಲ್ಪಾ ರವೀಂದ್ರ, ಸದಸ್ಯರಾದ ಪ್ರದೀಪ್ ಚಂದ್ರ ಕುತ್ಪಾಡಿ, ತಾರಾನಾಥ್ ಸುವರ್ಣ, ಜತಿನ್ ಕಡೆಕಾರ್, ವಿನಯ ಪ್ರಕಾಶ್, ನವೀನ್ ಶೆಟ್ಟಿ, ವೀಣಾ ಪ್ರಕಾಶ್, ರಾಘವೇಂದ್ರ ಕುತ್ಪಾಡಿ, ಸಬಿತಾ ಸುವರ್ಣ, ಅರುಣ್ ಶೆಟ್ಟಿ ,ರೇಣುಕಾ ವಿ ಸುವರ್ಣ, ಪಂಚಾಯತ್ ಪಿಡಿಓ ಪ್ರವೀಣ್ ಡಿಸೋಜ, ಶಶಿಧರ್ ಬಂಗೇರ, ಮನೋಜ್, ಚೈತನ್ಯ ಸೋಶಿಯಲ್ ವೆಲ್ಫೇರ್ ಫೌಂಡೇಶನ್ ನ ಪ್ರವರ್ತಕರಾದ ಸುನೀಲ್ ಸಾಲ್ಯಾನ್ ಕಡೆಕಾರ್, ಚೇತನ್ ಸುವರ್ಣ, ಸ್ವರೂಪ್, ಯತೀಶ್ ಮೊದಲಾದವರು ಉಪಸ್ಥಿತರಿದ್ದರು.
ಕಡೆಕಾರು ಗ್ರಾಮ ವ್ಯಾಪ್ತಿಯ 40 ಕ್ಕೂ ಅಧಿಕ ಅಂಗಡಿಗಳಿಗೆ ಭೇಟಿ ಪ್ಲಾಸ್ಟಿಕ್ನಿಂದ ಆಗುವ ತೊಂದರೆಗಳ ಬಗ್ಗೆ ಮಾಹಿತಿ ನೀಡಿ, ಸುಮಾರು 3 ಸಾವಿರ ಕೈಚೀಲಗಳನ್ನು ನೀಡಲಾಯಿತು.