ಉಡುಪಿ: ಪ್ಲಾಸ್ಟಿಕ್ ನಿಷೇಧಕ್ಕೆ ಮೊದಲ ಬಲಿ?
ಉಡುಪಿ: ಪ್ಲಾಸ್ಟಿಕ್ ನಿಷೇಧದ ಹಿನ್ನೆಲೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಪ್ಲೆಕ್ಸ್ ಮಾಲಕನೊರ್ವ ಮನೆಯಲ್ಲಿ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಣಗುಡ್ಡೆಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಸಂತೋಷ ಕುಮಾರ (39). ಬಾಳಿಗಾ ಆಸ್ಪತ್ರೆಯ ಬಳಿಯ, ವಿ. ಎಮ್ ನಗರದ ತನ್ನ ಮನೆಯ ಮಹಡಿಯಲ್ಲಿ ಬುಧವಾರ ರಾತ್ರಿ ಕೋಣೆಯಲ್ಲಿರುವ ಫ್ಯಾನ್‌ಗೆ ನೈಲಾನ್ ಹಗ್ಗ ಹಾಕಿ ಕುತ್ತಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತನ ಸಹೋದರ ಸಂಪತ್ ಕುಮಾರ್ ಮಣಿಪಾಲ ಠಾಣಾಗೆ ದೂರು ನೀಡಿದ್ದಾರೆ.
ಮೃತ ಸಂತೋಷ್‌ಗೆ ಕಳೆದ 5 ವರ್ಷಗಳಿಂದ ಮಾನಸಿಕ ಖಿನ್ನತೆ ಖಾಯಿಲೆ ಮತ್ತು ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿದ್ದರು, ಇವರು ಉಡುಪಿ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಕಟ್ಟಡದಲ್ಲಿ ಬ್ಯಾನರ್, ಪ್ಲೆಕ್ಸ್ ಪ್ರಿಂಟಿಂಗ್ ವ್ಯವಹಾರ ನಡೆಸುತ್ತಿದ್ದರು.
ಇತ್ತೀಚೆಗೆ ದೇಶದಾದ್ಯಂತ ಪ್ಲಾಸ್ಟಿಕ್ ನೀಷೇಧ ಹಿನ್ನೆಲೆ ಆರ್ಥಿಕ ಸಂಕಷ್ಟಕ್ಕೂ ಒಳಗಾಗಿದ್ದರೂ ಎಂದು ಸ್ಥಳೀಯರು ತಿಳಿಸಿದ್ದಾರೆ.
Sir, there is treatment for depression and even for piles.
Is plastic is reason for one death? (plastic banners are less cost and more duarable but in cloth it may cost little more )
But it must. (for everything banner is essential)
ಇಡೀ ದೇಶ ಪ್ಲಾಸ್ಟಿಕ್ ಮುಕ್ತವನ್ನಾಗಿಸುವ ಪ್ರಯತ್ನ ದಲ್ಲಿದ್ದರೆ , ಇಡೀ ಮಂಗಳೂರು, ಉಡುಪಿ ಜನತೆ ಪ್ಲಾಸ್ಟಿಕ್ ಮುಕ್ತ ಜಿಲ್ಲೆ ಯಾಗುತ್ತಿರುವ ಸಂತಸದಲ್ಲಿದ್ದರೆ ಇಲ್ಲೊಂದು ಉಲ್ಟಾ ಕೇಸ್. ನ್ಯೂಸ್ ನ ಹೆಡ್ ಲೈನ್ ನೋಡಿದರೆ ಇದು ಪ್ಲಾಸ್ಟಿಕ್ ನಿಷೇಧದಿಂದದಿಂದಲೇ ಆಗಿದ್ದು ಎಂಬಂತೆ ಬಿಂಬಿಸಲು ಪ್ರಯತ್ನ ನಡೆದಿರುವಂತಿದೆ ಹಾಗೂ ಅನುಮಾನಕ್ಕೆ ಕಾರಣವಾಗುವಂತಿದೆ. ನಿಜವಾದ ಕಾರಣಗಳೇನು ಎಂದು ತನಿಖೆ ನಡೆಯಲಿ ಆದಷ್ಟು ಬೇಗ ಸತ್ಯ ಹೊರಬರಲಿ ಎಂದು ಭಾವಿಸೋಣ.