ಅತ್ಯಾಚಾರಿಗಳ ಎನ್ಕೌಂಟರ್ ಅಲ್ಲ,ಯೋಜಿತ ಕೊಲೆ: ಮಾನವಹಕ್ಕು

ನವದೆಹಲಿ: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಎನ್‍ಕೌಂಟರ್ ಪ್ರಕರಣ ಒಂದು ಯೋಜಿತ ಕೊಲೆ ಎಂದು ಮಾನವಹಕ್ಕುಗಳ ಸಂಸ್ಥೆ ‘ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್’ ಆರೋಪ ಮಾಡಿ, 4 ಪ್ರಶ್ನೆಗಳನ್ನು ಮುಂದಿಟ್ಟಿದೆ.

ಪೊಲೀಸರ ಕಾರ್ಯಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಮಾನವಹಕ್ಕುಗಳ ಸಂಸ್ಥೆ (ಪಿಯುಸಿಎಲ್) ಮಾತ್ರ ಪ್ರಕರಣಕ್ಕೆ ಸಂಬಂಧಸಿದಂತೆ 4 ಪ್ರಶ್ನೆಗಳನ್ನು ಮುಂದಿಟ್ಟಿದೆ.

1.ಅಪರಾಧದ ದೃಶ್ಯವನ್ನು ಮರುಸೃಷ್ಟಿ ಮಾಡಲು ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಅದು 50ಕ್ಕೂ ಹೆಚ್ಚು ಮಂದಿ ತೆಲಂಗಾಣ ಪೊಲೀಸ್ ನೇತೃತ್ವದಲ್ಲಿ ನಡೆಸಿದ್ದು ಏಕೆ ?

2. ಆರೋಪಿಗಳನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಅವರು ಯಾವುದೇ ಶಸ್ತ್ರಗಳನ್ನು ಹೊಂದಿರಲಿಲ್ಲ. ಅಲ್ಲದೇ ಆರೋಪಿಗಳ ಕೈಗೆ ಕೊಳ ಹಾಕಿ, ಮುಖವನ್ನು ಮುಚ್ಚಿ ಘಟನಾ ಸ್ಥಳಕ್ಕೆ ಕರೆತರಲಾಗಿತ್ತು. ಈ ಮಾರ್ಗ ಬಿಟ್ಟರೇ ಅವರನ್ನು ಕ್ರೈಂ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಲು ಬೇರೆ ದಾರಿಯೇ ಇರಲಿಲ್ಲ. ಆದರೆ ಅವರು ಹೇಗೆ ಪೊಲೀಸರಿಂದ ತಪ್ಪಿಸಿಕೊಂಡು ಅಷ್ಟು ದೂರ ಹೋಗಿದ್ದು ಹೇಗೆ ?

3. ಗುಂಡು ಹಾರಿಸಲು ಅವರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರಾ? ನಾಲ್ವರು ಆರೋಪಿಗಳ ಎನ್‍ಕೌಂಟರ್ ಮಾಡಲು ಅವರು ಮಾಡಿದ ಪ್ರಚೋದನೆ ಆದರೂ ಏನು?

4. ಆರೋಪಿಗಳು ಯಾವುದೇ ಶಸ್ತ್ರ ಹೊಂದಿರಲಿಲ್ಲ. ಪೊಲೀಸರಿಗೆ ಶೂಟ್ ಮಾಡುವ ಅನಿವಾರ್ಯ ಪರಿಸ್ಥಿತಿ ಎದುರಾಗಿದ್ದರು ಕೂಡ ಆರೋಪಿಗಳ ಮೊಣಕಾಲಿನ ಕೆಳಭಾಗಕ್ಕೆ ಶೂಟ್ ಮಾಡಿ ಅವರನ್ನು ತಡೆಯಬಹುದಿತ್ತು. ಆದರೆ ಪೊಲೀಸರು ಆರೋಪಿಗಳ ದೇಹದ ಪ್ರಮುಖ ಅಂಗಾಂಗಗಳಿಗೆ ಶೂಟ್ ಮಾಡಿದ್ದು ಯಾಕೆ?

ಪಿಯುಸಿಎಲ್ ಸಂಸ್ಥೆ ಪೊಲೀಸರ ಈ ಕೃತ್ಯವನ್ನು ಯೋಜಿತ ಕೊಲೆ ಎಂದು ಕರೆದಿದ್ದು, ಎನ್‍ಕೌಂಟರ್ ನಡೆಸಿದ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲು ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದೆ. ಅಲ್ಲದೇ ನ್ಯಾಯಾಂಗ ತನಿಖೆಗೆ ಆಗ್ರಹಿಸಿದೆ.

ಪೊಲೀಸರ ವಶಕ್ಕೆ ನೀಡಲಾದ ಆರೋಪಿಗಳು ಅವರ ಕೈಯಲ್ಲೇ ಸುರಕ್ಷಿತರಾಗಿಲ್ಲದಿದ್ದರೆ ಅಕ್ರಮವಾಗಿ ಬಂಧಿಸಿರವರನ್ನು ಬಿಟ್ಟುಬಿಡಿ ಎಂದು ಸಂಸ್ಥೆ ತನ್ನ ಪ್ರಕಟನೆಯಲ್ಲಿ ಹೇಳಿದೆ. ಅಲ್ಲದೇ ಪೊಲೀಸರನ್ನು ವೈಭವೀಕರಸುತ್ತಿರುವುದುನ್ನು ನಿಲ್ಲಿಸುವಂತೆ ತಿಳಿಸಿದ್ದು, ಪೊಲೀಸರು ಯೋಜಿತ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸಂಶಯ ವ್ಯಕ್ತ ಪಡಿಸಿದೆ.


Leave a Reply

Your email address will not be published. Required fields are marked *

error: Content is protected !!