ಪಿತ್ರೋಡಿ : ನಮನ ವೆಂಕಟರಮಣ ನೇತೃತ್ವದಲ್ಲಿ ವನಮಹೋತ್ಸವ 

ಪಿತ್ರೋಡಿ:ನಮನ ವೆಂಕಟರಮಣ ಪಿತ್ರೋಡಿ ಇದರ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ವನಮಹೋತ್ಸವ ಕಾರ್ಯಕ್ರಮ ಉದ್ಯಾವರದ ಮಂಡಲ ಗುಡ್ಡೆಯಲ್ಲಿ ನಡೆಯಿತು.ವೆಂಕಟರಮಣ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ವಿಜಯಲಕ್ಷ್ಮಿ ನಾಗೇಶ್ ಗಿಡ ನೆಡುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಮತ್ತು ಯುವಕರ ಪರಿಸರ ಪ್ರೇಮಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ವೆಂಕಟರಮಣ ಭಜನಾ ಮಂಡಳಿಯ ಸಂಚಾಲಕರಾದ ವಸಂತ ಸಾಲಿಯಾನ್ ಮತ್ತು ಸ್ಥಳೀಯರಾದ ಸುರೇಶ್ ಕೋಟ್ಯಾನ್ ಮತ್ತು ಸೋಮಪ್ಪ ಉಪಸ್ಥಿತರಿದ್ದರು.
ನಮನ ವೆಂಕಟರಮಣ ಪಿತ್ರೋಡಿ ಸಂಘಟನೆಯ ಸದಸ್ಯರು ಮುಡ್ಡಲಗುಡ್ಡೆ  ಪರಿಸರದಲ್ಲಿ ಹಲಸು, ಕಹಿಬೇವು ಸಹಿತ ಇಪ್ಪತ್ತಕ್ಕೂ ಅಧಿಕ ಗಿಡಗಳನ್ನು ನೆಡುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ಗ್ರಾಪಂ ಸದಸ್ಯ ಮತ್ತು ಸಂಘಟನೆಯ ಮುಖ್ಯಸ್ಥ ಗಿರೀಶ್ ಸುವರ್ಣ ಸ್ವಾಗತಿಸಿ ಪರಿಸರ ಜಾಗೃತಿ ಬಗ್ಗೆ ಸಂದೇಶ ನೀಡಿದರು. ರವಿರಾಜ್ ಶ್ರೀಯಾನ್ ಧನ್ಯವಾದ ಸಮರ್ಪಣೆ ಮಾಡಿದರು. ಸಂದೀಪ್ ಮೆಂಡನ್ ಕಾರ್ಯಕ್ರಮ ನಿರೂಪಿಸಿದರು.
3 Attachments

Leave a Reply

Your email address will not be published. Required fields are marked *

error: Content is protected !!