ಮಣಿಪಾಲ ಕೊರೋನಾ ಸೋಂಕಿತನ ಫೋಟೋ ವೈರಲ್: ಐವರ ವಿರುದ್ಧ ದೂರು ದಾಖಲು

ಉಡುಪಿ :ಕೊರೋನಾ ಸೋಂಕಿತ ಮಣಿಪಾಲದ ಲ್ಯಾಬ್ ಟೆಕ್ನಿಶನ್ ಮತ್ತು ಆತನ ಪತ್ನಿಯ ಭಾವಚಿತ್ರವನ್ನು ವಾಟ್ಸ್ ಅಪ್ ಗ್ರೂಪ್‌ಗಳಲ್ಲಿ ಹರಿಯಬಿಟ್ಟ ಐವರ ವಿರುದ್ಧ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಸಾಮಾಜಿಕ ಜಾಲತಾಣದಲ್ಲಿ ಭಾವಚಿತ್ರ ಹರಿಯಬಿಟ್ಟ ಪರಿಣಾಮ ಸೋಂಕಿತ ವ್ಯಕ್ತಿ ಮತ್ತು ಆತನ ಪತ್ನಿ ಹಾಗೂ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಸೋಂಕಿತ ವ್ಯಕ್ತಿಯ ಅನುಮತಿಯನ್ನು ಪಡೆಯದೇ ವ್ಯಕ್ತಿಯ ಮತ್ತು ಅವರ ಹೆಂಡತಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಆರೋಪಿಗಳಾದ ಗೋಪಾಲಕೃಷ್ಣ ನಾಯಕ್ . ಗುರುಪ್ರಸಾದ್ ನಾಯಕ್ , ಸುಚಿತಾ ಪೈ , ಕೃಷ್ಣಪ್ರಭು , ಮತ್ತು ಇತರರು ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಾಗಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ, ಇವರು ನೀಡಿದ ದೂರಿನಂತೆ ದೂರು ದಾಖಲಾಗಿದೆ . ಈ ಬಗ್ಗೆ ಸೆನ್ ಅಪರಾಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!