ಏ.15ರಿಂದ ಮದ್ಯ ಮಾರಾಟಕ್ಕೆ ಅನುಮತಿ: ಸಿಎಂ ಯಡಿಯೂರಪ್ಪ
ಏಪ್ರಿಲ್ 14ರ ನಂತರ ಮದ್ಯ ಮಾರಾಟದ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದಿರುವ ಸಿಎಂ ಯಡಿಯೂರಪ್ಪ ಪರೋಕ್ಷವಾಗಿ ಏಪ್ರಿಲ್ 15ರಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಬಗ್ಗೆ ಸುಳಿವು ನೀಡಿದ್ದಾರೆ. ಹೀಗಾಗಿ, ಬುಧವಾರದಿಂದಲೇ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ಸಿಗಬಹುದು.
ಬಾರ್ ಓಪನ್ ಮಾಡಲು ಅವಕಾಶವಿಲ್ಲ. ಬದಲಿಗೆ ಸರ್ಕಾರದ MSIL ಮೂಲಕ ಮದ್ಯ ಮಾರಾಟಕ್ಕೆ ಅವಕಾಶ ಸಿಗುವ ಲಕ್ಷಣಗಳಿವೆ. ಒಂದು ಕಡೆ ಆತ್ಮಹತ್ಯೆ, ಮತ್ತೊಂದೆಡೆ ಬಾರ್‌ಗಳ ದರೋಡೆ ಹೀಗೆ ಕೊರೋನಾ ನಡುವೆ ಮದ್ಯ ಪ್ರಿಯರ ಹಾವಳಿ ಸರ್ಕಾರಕ್ಕೆ ದೊಡ್ಡ ತಲೆನೋವು ತಂದಿಟ್ಟಿದೆ.
ಈಗಾಗಲೇ ರಾಜ್ಯದಲ್ಲಿ ಗುರುತಿಸಲಾಗಿರುವ ಕೊರೋನಾ ವೈರಸ್ ರೆಡ್ ಮತ್ತು ಆರೇಂಜ್ ಜಿಲ್ಲೆಗಳಲ್ಲಿ ಹೊರತುಪಡಿಸಿ ಇನ್ನುಳಿದ ಜಿಲ್ಲೆಗಳಲ್ಲಿ MSILಗಳ ಮೂಲಕ ಮದ್ಯ ಮಾರಾಟಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಕೊಡಬಹುದು.