ಪೆರ್ಡೂರು: ಹಾವು ಕಚ್ಚಿ ಬಾಲಕ ಸಾವು
ಹಿರಿಯಡ್ಕ: ಆಟವಾಡಿ ಮನೆಯ ಕಡೆ ಹೋಗುತ್ತಿದ್ದ ಬಾಲಕನಿಗೆ ಹಾವು ಕಚ್ಚಿ ಮೃತ ಪಟ್ಟ ಘಟನೆ ನಡೆದಿದೆ.
ಪೆರ್ಡೂರಿನ ಹೆರ್ಡೆ ದರ್ಖಾಸು ಮನೆಯ ರಾಜು ಶೆಟ್ಟಿ ಮತ್ತು ಗೀತಾ ಶೆಟ್ಟಿ ದಂಪತಿಗಳ ಮಗನಾದ ಅಭಿನವ (9) ನಿನ್ನೆ ಸಂಜೆ ಶಾಲೆಯಿಂದ ಮನೆಗೆ ಬಂದವ ಪಕ್ಕದ ಮನೆಯ ನಾಯಿಗಳು ಕಚ್ಚಾಡುತ್ತಿದ್ದನ್ನು ನೋಡಲು ಅಣ್ಣನೊಂದಿಗೆ ಹೋಗಿದ್ದ. ರಾತ್ರಿ 7 ಗಂಟೆಗೆ ಮನೆಗೆ ಬರುತ್ತಿರುವಾಗ ಅಂಗಳದಲ್ಲಿ ಯಾವುದೋ ವಿಷದ ಹಾವು ಕಚ್ಚಿದ್ದು, ಕೂಡಲೇ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.