ಪೆರಂಪಳ್ಳಿ : ಕಾಳು ಮೆಣಸಿನ ಗಿಡ ನೆಡುವ ತರಬೇತಿ ಕಾರ್ಯಾಗಾರ 

ಪೆರಂಪಳ್ಳಿ, : ಐ.ಸಿ.ವೈ.ಎಮ್ ಪೆರಂಪಳ್ಳಿ ಘಟಕ ಹಾಗೂ ಕ್ರಷಿ ವಿಜ್ಞಾನ ಕೇಂದ್ರ, ಬ್ರಹ್ಮಾವಾರ. ಇವರ ಜಂಟಿ ಆಶ್ರಯದಲ್ಲಿ ಲಾವ್ದಾತೊ-ಸಿ ಧ್ಯೇಯದಡಿ ಕಾಳು ಮೆಣಸಿನ ಗಿಡ ನೆಡುವ ತರಬೇತಿ ಕಾರ್ಯಗಾರವು ಪೆರಂಪಳ್ಳಿ ಫಾತಿಮಾ ಮಾತೆಯ ದೇವಾಲಯದ ಆವರಣದಲ್ಲಿ ಜರಗಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಕ್ರಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಧನಂಜಯ ಇವರು ಪ್ರಯೊಗಿಕವಾಗಿ ಕಾಳು ಮೆಣಸಿನ ಗಿಡವನ್ನು ನೆಟ್ಟು ಅದನ್ನು ಯಾವ ರೀತಿ ಪಾಲನೆ-ಪೋಷಣೆ ಮಾಡಬೇಕಾಗಿ ಸವಿಸ್ತಾರವಾಗಿ ಯುವಜನರಿಗೆ ಅರಿವು ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾಗಿ ಚರ್ಚನ ಧರ್ಮಗುರುಗಳು ವ| ಅನಿಲ್ ಡಿಸೋಜ,ಮುಖ್ಯ ಅಥಿತಿಯಾಗಿ ಪೆರಂಪಳ್ಳಿ  ಕ್ರಷಿಸಂಘದ ಅಧ್ಯಕ್ಷರು ಶ್ರೀ.ಸುಬ್ರಹ್ಮಣ್ಯ ಶಿರಿಯಾನ್, ಚರ್ಚ್ ಪಾಲನಾ ಮಂಡಳಿಯ ಸದಸ್ಯರಾದ ಶ್ರೀಮತಿ ರೋಜಿ ವಿಲಿಯಂ ಪಿಂಟೊ, ಶ್ರೀ ಜೊಸ್ಸಿ ಪಿಂಟೊ, ಧರ್ಮಭಗಿನಿ ಸಿ| ಲೇನಿಟಾ ಡಿಸೋಜ ಹಾಗೆಯೇ ಐ.ಸಿ.ವೈ.ಮ್ ನ ಅಧ್ಯಕ್ಷರಾದ ಬೆನ್ಸನ್ ಡಿಸೋಜ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.
ಲಾವ್ದಾತೊ-ಸಿ ಪರಿಸರ ಸಂರಕ್ಷಣಾ  ಧ್ಯೇಯದಡಿ ಐ.ಸಿ.ವೈ.ಮ್ ನ ಸದಸ್ಯರು ಸಂಪನ್ಮೂಲ ವ್ಯಕ್ತಿಯ ಸಂಪೂರ್ಣ ಮಾಹಿತಿಯಡಿ ಚರ್ಚ್‌ನ ತೋಟದಲ್ಲಿ ಕಾಳುಮೆಣಸು ಗಿಡ, ಹಾಗೆಯೇ ಇತರ ತರಕಾರಿಗಳ ಬೀಜ ಬಿತ್ತನೆ ಮಾಡುವ ಮೂಲಕ ಪರಿಸರದ ಕಾಳಜಿ ಹೆಚ್ಚಿಸುವಲ್ಲಿ ಸಫಲರಾದರು.ಐಸಿವೈಎಂ ಅಧ್ಯಕ್ಷ ಬೆನ್ಸನ್ ಡಿಸೋಜ ಸ್ವಾಗತಿಸಿದರೆ, ಲೀಮಾ ಡಿಸೋಜ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.

Leave a Reply

Your email address will not be published. Required fields are marked *

error: Content is protected !!