ಪೆರಂಪಳ್ಳಿ: ಕಳ್ಳಭಟ್ಟಿ ನಡೆಸುತ್ತಿದ್ದ ಮನೆಗೆ ದಾಳಿ, ಓರ್ವನ ಬಂಧನ
ಉಡುಪಿ: ಪೆರಂಪಳ್ಳಿ ಮನೆಯೊಂದರಲ್ಲಿ ಕಳ್ಳಭಟ್ಟಿ ನಡೆಸುತ್ತಿರುವ ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಒರ್ವನನ್ನು ಬಂಧಿಸಿದ್ದಾರೆ. ಬಂಧಿತ ಜೋಸೆಫ್ ಮಸ್ಕರೇನಸ್ ಮನೆಗೆ ದಾಳಿ ಮಾಡಿ 5ಲೀಟರ್ ಕಳ್ಳಭಟ್ಟಿ ವಶಪಡಿಸಿಕೊಂಡಿದ್ದಾರೆ.
ಅಬಕಾರಿ ಜಂಟಿ ಆಯುಕ್ತರು ಮಂಗಳೂರುರವರ ಆದೇಶದಂತೆ ಉಡುಪಿ ಅಬಕಾರಿ ಉಪಆಯುಕ್ತರಾದ ನಾಗೇಶಕುಮಾರ ಡಿ ಇವರ ನಿರ್ದೇಶನದಲ್ಲಿ ದಾಳಿಯಲ್ಲಿ ಶುಭದಾ ಸಿ ನಾಯಕ್ ಅಬಕಾರಿ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿಗಳಾದ ಕ್ರಷ್ಣ, ದಿವಾಕರ, ದಿನೇಶರವರು ಭಾಗವಹಿಸಿದ್ದರು.
ಈಗಾಲೇ ಜಿಲ್ಲೆಯಲ್ಲಿ ಮೂರು ಪ್ರಕರಣ ದಾಖಲಾಗಿದ್ದು, ಏ.1 ರಂದು ಪೆರಂಪಳ್ಳಿಯಲ್ಲಿ 2.5 ಲೀ. ಕಳ್ಳಭಟ್ಟಿ, ಒಂದು ವಾಗನರ್ ಕಾರ್. ಏ.4 ರಂದು 750 ಲೀ ಕಳ್ಳಭಟ್ಟಿ, 40ಲೀ. ಬೆಲ್ಲದ ಕೊಳೆ ವಶಪಡಿಸಿಕೊಳ್ಳಲಾಗಿದೆಂದು ಅಬಕಾರಿ ಉಪಆಯುಕ್ತ ನಾಗೇಶಕುಮಾರ ಡಿ ತಿಳಿಸಿದ್ದಾರೆ.
ಅಕ್ರಮ ಕಳ್ಳಭಟ್ಟಿ ತಡಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ ಹಿನ್ನೆಯಲ್ಲಿ ಪ್ರತಿನಿತ್ಯ ಹತ್ತು ಬಾರಿ ಪಲಿಮಾರು, ಇನ್ನಾ, ಪೆರಂಪಳ್ಳಿ ಭಾಗಗಳಿಗೆ ಗಸ್ತು ತಿರುಗುವುದಾಗಿ ಹೇಳಿದರು.
Actually thr was a empty bottle these jobless police filled those bottles with water.. Thy just need case and want to spoil our villages name.. May god bless them and bring them on a right track..