ಸಂವಿಧಾನದ ಮೇಲೆ ಗೌರವವಿಲ್ಲದವರು ದೇಶಬಿಟ್ಟು ತೊಲಗಿ:ಜಯನ್ ಮಲ್ಪೆ

ಉಡುಪಿ: ಸಮಾನತೆ ಸಹೋದರತೆ ಮತ್ತು ಬಾಂಧ್ಯತ್ವವನ್ನು ಸಾರುವ ಅಂಬೇಡ್ಕರ್ ಬರೆದ ಭಾರತದ ಸಂವಿಧಾನದ ಮೇಲೆ ಗೌರವವಿಲ್ಲದವರು ಈ ದೇಶಬಿಟ್ಟು ತೊಲಗಲಿ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ. ಅವರು ಇಂದು ಉಡುಪಿ ಅಜ್ಜರಕಾಡು ಹುತ್ತಾತ್ಮ ಸ್ಮಾರಕ ಬಳಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವ ರೀತಿಯಲ್ಲಿ ರಾಜ್ಯ ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯ ವಿರುದ್ಧ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ಬಿಜೆಪಿ ಸರಕಾರದ ವಜಾಕ್ಕೆ ಆಗ್ರಹಿಸಿ ನಡೆಸಿದ ಪ್ರತಿಭಟನಾಗಾರರನ್ನು ಉದೇಶಿಸಿ ಮಾತನಾಡುತ್ತಾ,
ಚಾಹಾ ಮಾರುವ ಹುಡುಗ ಪ್ರಧಾನಿಯಾಗಿದ್ದು,ಮನೆ ಮನೆಗೆ ಪೇಪರ್ ಹಾಕುವ ಹುಡುಗ ರಾಷ್ಟ್ರಪತಿಯಾಗಿದು ಇದೇ ಅಂಬೇಡ್ಕರ್ ಬರೆದ ಸಂವಿಧಾನದಿಂದ ಎಂದಿರುವ ಜಯನ್ ಮಲ್ಪೆ ಸಂವಿಧಾನಕ್ಕೆ ಅಪಚಾರ ಎಸೆಗಿದರೆ ಈ ದೇಶ ಜಾತಿ ಹೆಸರಲ್ಲಿ ತುಂಡು ತಂಡಾಗಿ ಹೋಗುತ್ತದೆ ಎಂದರು.
ಸಮಾಜಸೇವಕ ಹಾಗೂ ಉದ್ಯಮಿ ಅಮೃತ್ ಶೆಣೈ ಮಾತನಾಡಿ ಮಾನವಹಕ್ಕುಗಳ ಪ್ರತಿಪಾದಕ ಮತ್ತು ಸಮಾಜಿಕ ನ್ಯಾಯದ ಹರಿಕಾರನ ಹೆಸರು ನಾಶಮಾಡುವ ತಂತ್ರ ಬಿಜೆಪಿಯ ಅಜೆಂಡ,ಇತಿಹಾಸದ ಪುಟಗಳಿಂದ ಅಂಬೇಡ್ಕರ್ ಹೆಸರು ಇಲ್ಲದಂತ್ತೆ ಮಾಡುವ ಹಿಂದೆ ಆರ್‌ಎಸ್‌ಎಸ್ ಕುತಂತ್ರವಿದೆ.ಸೂರ್ಯ ಚಂದ್ರರು ಈ ಭೂಮಿ ಮೇಲೆ ಇರುವವರೆಗೆ ಭಾರತದ ಸಂವಿಧಾನವನ್ನು ಅಂಬೇಡ್ಕರ್‌ರೇ ಬರದದ್ದು ಎಂದರು.
ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಮಂಜುನಾಥ ಗಿಳಿಯಾರು ಮಾತನಾಡಿ ಮುಸ್ಲಿಮರ ವಿರುದ್ಧ ದಲಿತರನ್ನು ಎತ್ತಿಕಟ್ಟಿ ಯಶಸ್ವಿಯಾಗುವ ಹುನ್ನಾರವನ್ನ ರೂಪಿಸಿದ ಮನುವಾದಿಗಳು ದೇಶದ ಪ್ರತಿಯೊಂದು ಸಂಸ್ಥೆಯಲ್ಲಿ ತಮ್ಮ ಅಜೆಂಡವನ್ನು ವ್ಯವಸ್ಥಿತವಾಗಿ ಜಾರಿಗೊಳಿಸಿ ದಲಿತ ಮುಸ್ಲಿಮ್ ಕ್ರಿಶ್ತರನ್ನಯ ಈ ವ್ಯಸಸ್ಥೆಯಲ್ಲಿ ನಾಶಮಾಡುವ ತಂತ್ರ ಅಡಗಿದೆ ಎಂದರು.
ಪ್ರತಿಭಟನೆಯಲ್ಲಿ ಹಿರಿಯ ದಲಿತ ಮುಖಂಡ ಸುಂದರ ಕಪ್ಪೆಟ್ಟು,ಯವಸೇನೆಯ ಅದ್ಯಕ್ಷ ಹರೀಶ್ ಸಾಲ್ಯಾನ್ ಮಲ್ಪೆ, ಅನೀಲ್ ಅಂಬಲಪಾಡಿ,ಸಂತೋಷ್ಕ
ಪ್ಪೆಟ್ಟು,ಗಣೇಶ್‌ನೆರ್ಗಿ,ಭಗವಾನ್ ಮಲ್ಪೆ,ಗುಣವಂತ ತೊಟ್ಟಂ,ಯುವರಾಜ್ ಪುತ್ತೂರು,ದಿನೇಶ್ ಮೂಡುಬೆಟ್ಟು,ಸಂಪತ್ ಗುಜ್ಜರಬೆಟ್ಟು,ರಮೇಶ್‌ಪಾಲ್, ರಾಜು ಬೆಟ್ಟಿನಮನೆ,ಸುಕೇಶ್ ಪುತ್ತೂರು,ರಮೋಜಿ ಮಲ್ಪೆ,ಪ್ರಸಾದ್ ನೆರ್ಗಿ,ಅಶೋಕ್ ನಿಟ್ಟೂರು ಹಾಗೂ ಮೋಹನ್‌ದಾಸ್ ಚಿಟ್ಪಾಡಿ ಮುತ್ತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!