ರಸ್ತೆಗೆ ಡಾಂಬರೀಕರಣದ ಭಾಗ್ಯ ಯಾವಾಗ..? ತೆಂಕಬೆಟ್ಟು ಗ್ರಾಮಸ್ಥರ ಗೋಳು
ಹೆಬ್ರಿ: ಹೆಸರಿಗೆ ರಸ್ತೆ ಏನೋ ಇದೆ ಆದ್ರೆ ಡಾಂಬರೀಕರಣವಿಲ್ಲದೇ ಹೊಂಡಗುಂಡಿಗಳಿಂದ ಕೆಸರುಮಯದ ರಸ್ತೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು. ಹೆಬ್ರಿಯ ಚಾರ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಬರುವ ತೆಂಕಬೆಟ್ಟು ಹಾಗೂ ಕೆಳಕಾರಾಡಿ ಎಂಬ ಊರಿನ ರಸ್ತೆ ಮಳೆಗಾಲದಲ್ಲಿ ಕೆಸರು ತುಂಬಿದ ಗದ್ದೆಯಂತಾಗಿದೆ.
ತೆಂಕಬೆಟ್ಟು ಎಂಬಲ್ಲಿ ಸರಿಸುಮಾರು ಮೂವತ್ತು ಮನೆಗಳಿದ್ದರೆ,ಕೆಳಕಾರಾಡಿಯಲ್ಲಿ ಇಪ್ಪತ್ತೈದು ಮನೆಗಳಿವೆ ಇಲ್ಲಿ ರಸ್ತೆಗಳಿದ್ದರೂ ಹೊಂಡಗಳಿಂದ ವಾಹನ ಚಲಾವಣೆ ಮಾಡುವುದೇ ಕಷ್ಟವಾಗಿದೆ.
ದ್ವಿಚಕ್ರ ವಾಹನ ಸವಾರರಿಗೆ ಮಾತ್ರವಲ್ಲ ಶಾಲೆಗೆ ತೆರಳುವ ಮಕ್ಕಳಿಗೂ ಕಷ್ಟವಾಗುತ್ತಿದೆ ಎನ್ನುವುದು ಗ್ರಾಮಸ್ಥರ ದೂರು.
ಶೀಘ್ರದಲ್ಲೇ ರಸ್ತೆಗೆ ಡಾಂಬರೀಕರಣ ಮಾಡಬೇಕು. ತುರ್ತು ಪರಿಸ್ಥಿತಿಗಳಲ್ಲೂ ವಾಹನಗಳು ಬರಲಾಗದ ಪರಿಸ್ಥಿತಿಯಲ್ಲಿರುವ ರಸ್ತೆಗಳ ಬಗ್ಗೆ ನಿರ್ಲಕ್ಷ್ಯವಹಿಸಿರುವ ಚಾರ ಗ್ರಾಮಪಂಚಾಯತ್ ವಿರುದ್ಧ ಗ್ರಾಮಸ್ಥರು