ಜನ ಸ್ನೇಹಿಯಾದ ಪೆರಂಪಳ್ಳಿ ರಿಕ್ಷಾ ಚಾಲಕರು
ಉಡುಪಿ: ರಿಕ್ಷಾ ಚಾಲಕರೆಂದರೆ ಸಂಶಯದಿಂದ ನೋಡುವ ಜನರೇ ಹೆಚ್ಚು, ಎಲ್ಲಿ ಬಾಡಿಗೆ ದರ ಹೆಚ್ಚು ವಸೂಲು ಮಾಡುತ್ತಾರೆಂದು ಅಥವಾ ರಿಕ್ಷಾಗಳನ್ನು ಅತೀಯಾದ ವೇಗದಲ್ಲಿ ಕೊಂಡು ಹೋಗಿ ಅಪಘಾತ ಮಾಡಿ ಬಿಡುತ್ತಾರೋ ಎಂದು. ಆದರೆ ಉಡುಪಿ ಪೆರಂಪಳ್ಳಿ ರಿಕ್ಷಾ ಚಾಲಕರು ಇದಕ್ಕೆ ವಿರುದ್ಧವಾಗಿ ಜನ ಮೆಚ್ಚುವಂತಹ ಕೆಲಸ ಮಾಡಿ ಸ್ಥಳೀಯರಿಂದ ಪ್ರಶಂಸೆಗೆ ಪಾತ್ರರಗಿದ್ದರೆ.
ಪೆರಂಪಳ್ಳಿಂದ ಅಂಬಾಗಿಲು ರಸ್ತೆಯು ಇತ್ತೀಚೆಗೆ ಸುರಿದ ವಿಪರೀತ ಮಳೆಗೆ ಬೃಹದಾಕಾರದ ಗುಂಡಿಗಳಿಂದ ಕೂಡಿತ್ತು. ಈ ರಸ್ತೆಯಲ್ಲಿ ದಿನ ನಿತ್ಯ ಸಂಚರಿಸುವ ರಿಕ್ಷಾ ಚಾಲಕರು ನಗರ ಸಭೆ ದುರಸ್ತಿಗೊಳಿಸುತ್ತದೆಂದು ಕಾದು ಕುಳಿತುಕೊಳ್ಳದೆ ತಾವೇ ಸ್ವತ: ಈ ಗುಂಡಿಗಳನ್ನು ಮುಚ್ಚಿ ನಾಗರಿಕರ ಮೆಚ್ಚುಗೆಗೆ ಪಾತ್ರರಾದರು.
ಮಣಿಪಾಲ ,ಪೆರಂಪಳ್ಳಿ ಭಾಗದ ಹೆಚ್ಚಿನ ರಸ್ತೆಗಳು ಗುಂಡಿಗಳಿಂದ ಕೂಡಿದೆ ಇದರಿಂದಾಗಿ ನಮ್ಮ ವಾಹನ ಕೆಟ್ಟು ಹೋಗುತ್ತದೆ. ಆದ್ದರಿಂದ ನಾವು ಹಗಲು ರಾತ್ರಿ ದುಡಿದರೂ ವಾಹನದ ಬಿಡಿಭಾಗಗಳಿಗೆ ಹಣ ವ್ಯಯಿಸುವಂತಾಗಿದೆ ಎನ್ನುತ್ತಾರೆ ಇಲ್ಲಿನ ಚಾಲಕರು. ಅದಕ್ಕಾಗಿ ನಾವೇ ಸ್ವತ: ರಸ್ತೆ ದುರಸ್ಥಿಗೆ ಇಳಿಬೇಕಾಯಿತೆಂದರು