ನಡೆದು ಹೋಗುತ್ತಿದ್ದ ವ್ಯಕ್ತಿಗೆ ದಂಡ: ಆಕ್ಷೇಪ

ಕಡಬ(ಉಪ್ಪಿನಂಗಡಿ): ಕಡಬ ಕಾಲೇಜು ಕ್ರಾಸ್ ಬಳಿ ಹೆಲ್ಮೆಟ್ ಧರಿಸದ ಬೈಕ್ ಸವಾರ ಪೊಲೀಸರನ್ನು ಕಂಡು  ಹಿಂಬದಿ ಸವಾರನನ್ನು ಇಳಿಸಿ ತೆರಳಿದ್ದು, ಈ ವೇಳೆ ಬೈಕ್‌ನಿಂದ ಇಳಿದು ನಡೆದು ಬರುತ್ತಿದ್ದ ವ್ಯಕ್ತಿ ತಡೆದ ಪೊಲೀಸರು ಆತನಿಗೆ ₹ 500 ದಂಡ ವಿಧಿಸಿದ್ದಾರೆ. ಪೊಲೀಸರು ಕೃತ್ಯಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿಯೂ ನಡೆದಿದೆ.

ಕಡಬದಲ್ಲಿ ಗುರುವಾರ ನಡೆದ ಗೃಹ ಪ್ರವೇಶಕ್ಕೆಂದು ಕಾಸರಗೋಡಿನಿಂದ ಬಂದಿದ್ದ ಯುವಕನನ್ನು ಆ ಮನೆ ಯುವಕ ಬಸ್ಸು ನಿಲ್ದಾಣದವರೆಗೆ ಬಿಡುವುದಕ್ಕೆ ಹೆಲ್ಮೆಟ್ ಧರಿಸದೆ ಬಂದಿದ್ದು, ಈ ವೇಳೆ ಕಡಬದ ಕಾಲೇಜು ಕ್ರಾಸ್ ಬಳಿ ಹೈವೇ ಪೆಟ್ರೋಲ್ ವಾಹನ ನಿಂತಿರುವುದನ್ನು ಗಮನಿಸಿದ ಬೈಕ್ ಸವಾರ ಹಿಂಬದಿ ಸವಾರನನ್ನು ಅಲ್ಲಿಯೇ ಇಳಿಸಿ ವಾಪಸ್‌  ತೆರೆಳಿದ್ದ.

ಇದನ್ನು ಗಮನಿಸಿದ ಪೊಲೀಸರು ಇಳಿದು ನಡೆದುಕೊಂಡು ಬರುತ್ತಿದ್ದ ಯುವಕನಿಗೆ ₹ 500 ದಂಡ ಹಾಕಿದ್ದು, ದಂಡ ಪಾವತಿಸಿದೇ ಯುವಕ ಅಲ್ಲಿಂದ ತೆರಳಿದ್ದ. ಯುವಕನನ್ನು ಅವ್ಯಾಚ ಶಬ್ದಗಳಿಂದ ನಿಂದಿಸಿದ ಪೋಲಿಸರ ಈ ವರ್ತನೆ ಸರಿಯಲ್ಲ ಎಂದು ಸ್ಥಳದಲ್ಲಿದ್ದ ಕಡಬ ಗ್ರಾಮ ಪಂಚಾಯಿತಿ ಸದಸ್ಯರಾದ ಅಶ್ರಫ್ ಶೇಡಿಗುಂಡಿ, ಹಾಜಿ ಹನೀಫ್ ಕೆ.ಎಂ., ಶರೀಫ್ ಪೊಲೀಸರನ್ನು ತರಾಟಗೆ ತೆಗೆದುಕೊಂಡ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!