ಪೇಜಾವರ ಶ್ರೀ ತೀವೃ ಅಸ್ವಸ್ಥ ಮಣಿಪಾಲ ಆಸ್ಪತ್ರೆಗೆ ದಾಖಲು

ಉಡುಪಿ: ಅಷ್ಠ ಮಠಗಳ ಹಿರಿಯ ಯತಿಗಳಾದ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಿಗೆ ಇಂದು ಮುಂಜಾನೆ ಹಠಾತ್ ಆಗಿ ಕಾಣಿಸಿಕೊಂಡ ಉಸಿರಾಟದ ತೊಂದರೆ ಮತ್ತು ನ್ಯೂಮೋನಿಯಾದಿಂದ ಬಳಲುತ್ತಿದ್ದವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವೃ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದು ಬಂದಿದೆ.

ರಾತ್ರಿ ಮಠದಲ್ಲಿದ್ದ ಶ್ರೀಗಳಿಗೆ ಹೃದಯದಲ್ಲಿ ನೋವು ಕಾಣಿಸಿಕೊಂಡ ತಕ್ಷಣ ಮಠದ ಸಿಬ್ಬಂದಿಗಳು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ಮಠದ ಮೂಲಗಳು ತಿಳಿಸಿವೆ. ಗುರುವಾರ ಬೆಳಗ್ಗೆ ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ಅಸ್ವಸ್ಥಗೊಂಡಿದ್ದ ಶ್ರೀಗಳಿಗೆ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಅಸ್ವಸ್ಥತೆ ಯಿಂದ ಮಣಿಪಾಲ ಆಸ್ಪತ್ರೆ ತೀವ್ರ ನಿಗಾದಲ್ಲಿ‌ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಶ್ರೀ ವಿಶ್ವೇಶ್ವತೀರ್ಥ ಸ್ವಾಮೀಜಿಯವರನ್ನು  ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂದು ಬೆಳಿಗ್ಗೆ ಸಂದರ್ಶಿಸಿದರು. ಆಸ್ಪತ್ರೆಯ ತೀವೃ ನಿಗಾ ವಿಭಾಗಕ್ಕೆ ಭೇಟಿ ನೀಡಿದ ಅವರು, ವೈದ್ಯರೊಂದಿಗೆ ಸಮಾಲೋಚಿಸಿ ಶ್ರೀ ಗಳ ಆರೋಗ್ಯದ ಮಾಹಿತಿ ಪಡೆದರು

Leave a Reply

Your email address will not be published. Required fields are marked *

error: Content is protected !!