ಪೇಜಾವರ ಶ್ರೀಗಳ ಆರೋಗ್ಯ ಕ್ಷೀಣ, ಯಡಿಯೂರಪ್ಪ ಉಡುಪಿಯಲ್ಲಿ ವಾಸ್ತವ್ಯ
ಉಡುಪಿ: ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಶ್ವಾಸಕೋಶ ಉಸಿರಾಟ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಆರೋಗ್ಯವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿಚಾರಿಸಿದರು. ಶನಿವಾರ ಸಾಯಂಕಾಲ ಆಸ್ಪತ್ರೆಗೆ ವಾರದಲ್ಲಿ ಎರಡನೆಡ ಭಾರಿಗೆ ಆಗಮಿಸಿದ ಅವರು, ಆಸ್ಪತ್ರೆ ವೈದ್ಯರೊಂದಿಗೆ ಶ್ರೀಗಳ ಆರೋಗ್ಯದ ಬಗ್ಗೆ ವಿಚಾರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿಲ್ಲ. ಕ್ಷಣ ಕ್ಷಣ ಅವರ ಆರೋಗ್ಯ ಸ್ಥಿತಿ ಕ್ಷೀಣವಾಗುತ್ತಿದೆ. ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ. ವೈದ್ಯರ ಪ್ರಯತ್ನ ಮುಂದುವರೆದಿದೆ . ಇವತ್ತು, ನಾಳೆ ಉಡುಪಿಯಲ್ಲೆ ಇದ್ದೇನೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.