ಪಲಿಮಾರು ಶ್ರೀಗಳಿಗೆ ಪೌರ ಸನ್ಮಾನ
ಉಡುಪಿ: ಅದಮಾರು ಶ್ರೀಗಳು ಪರ್ಯಾಯ ಪೀಠ ಏರುವ ಸಂದರ್ಭದಲ್ಲಿ ಪರ್ಯಾಯ ಪೀಠದಿಂದ ನಿರ್ಗಮಿಸುತ್ತಿರುವ ಶ್ರೀ ವಿದ್ಯಾಧೀಶ ಶ್ರೀಪಾದರಿಗೆ ಪೌರ ಸನ್ಮಾನ ನಡೆಯಿತು. ರಥಬೀದಿಯಲ್ಲಿ ಹಾಕಲಾಗಿದ್ದ ಭವ್ಯ ಮಂಟಪದಲ್ಲಿ ಸಾರ್ವಜನರಿಕರ ಪರವಾಗಿ ಶ್ರೀಗಳಿಗೆ ಸನ್ಮಾನ ಮಾಡಿ ಅಭಿನಂದಿಸಲಾಯಿತು.
ಭಾವೀ ಪರ್ಯಾಯ ಶ್ರೀಗಳಾದ ಈಶಪ್ರಿಯ ತೀರ್ಥರು ಊರವರ ಪರವಾಗಿ ಈ ಸನ್ಮಾನ ಮಾಡಿದರು. ಈ ಸಂದರ್ಭ ನೂತನ ಪರ್ಯಾರ ಪೀಠ ಏರಲಿರುವ ಈಶಪ್ರಿಯ ಶ್ರೀಪಾದರು, ಪಲಿಮಾರು ಕಿರಿಯ ಶ್ರೀಗಳಾದ ವಿದ್ಯಾರಾಜೇಶ್ವರ ಶ್ರೀಪಾದರು, ಮೈಸೂರು ಮಹಾರಾಜರು ಯದುವೀರ್,ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ, ಜಿಲ್ಲಾಧಿಕಾರಿ ಜಗದೀಶ್, ಶಾಸಕ ರಘುಪತಿ ಭಟ್,ಸಹಿತ ಊರ ಗಣ್ಯರ ಜೊತೆಗೆ ಸಹಸ್ರ ಸಹಸ್ರ ಸಂಖ್ಯೆಯ ಭಕ್ತರು ಈ ಸಂದರ್ಭ ಹಾಜರಿದ್ದರು. ಇದರೊಂದಿಗೆ ಅದಮಾರು ಪರ್ಯಾಯಕ್ಕೆ ಕೃಷ್ಣಮಠದ ರಥಬೀದಿ ವಿದ್ಯುಕ್ತವಾಗಿ ಅಡಿ ಇಟ್ಟಂತಾಗಿದೆ.